ಕೋವಿಡ್‍ನಿಂದ ಶೈಕ್ಷಣಿಕ ವರ್ಷ ಹಿನ್ನಡೆ; KSRTC ಬಸ್ ಪಾಸ್ ಅವಧಿ ವಿಸ್ತರಣೆ

Update: 2022-06-28 14:24 GMT

ಬೆಂಗಳೂರು, ಜೂ.28: 2021-22ನೇ ಸಾಲಿನಲ್ಲಿ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ಆಗಸ್ಟ್ ನಿಂದ ನವೆಂಬರ್ ವರೆಗೂ ಪರೀಕ್ಷೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಕೆಎಸ್ಸಾರ್ಟಿಸಿ ಬಸ್ ಪಾಸ್ ಅನ್ನು ವಿಸ್ತರಿಸಲಾಗಿದೆ.

ತರಗತಿಗಳು ನಡೆಯುತ್ತಿರುವುದನ್ನು ಪರಿಶೀಲಿಸಿ ಒಂದು ಅಥವಾ ಎರಡು ತಿಂಗಳ ಅವಧಿಗೆ ನಿಗದಿತ ಮೊತ್ತವನ್ನು ಪಾವತಿಸಿಕೊಂಡು ರಶೀದಿ ನೀಡುವುದು. ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನೂ ತೋರಿಸಿ ಪ್ರಯಾಣಿಸುವಂತೆ ನಿಗಮವು ಪ್ರಕಟನೆ ಹೊರಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News