×
Ad

ಕಲಬುರಗಿ | ಗೂಡ್ಸ್ ವಾಹನ - ಕಾರು ಮುಖಾಮುಖಿ ಢಿಕ್ಕಿ: ಇಬ್ಬರು ಮೃತ್ಯು

Update: 2022-06-30 13:18 IST

ಕಲಬುರಗಿ, ಜೂ.30: ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಎರಡು ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಆಳಂದ ಪಟ್ಟಣದ ಬಾಳೇನಗಲ್ಲಿ ನಿವಾಸಿ, ಗೂಡ್ಸ್ ವಾಹನದ ಚಾಲಕ ಜಾಫರ್ ಖಾಸಿಂ(27) ಮತ್ತು ಗುಜರಾತ್ ಮೂಲದ ಉದ್ಯಮಿ, ಕಾರು ಚಾಲಕ ಜೋಧಾರಾಮ ಜಸ್ವಂತ್ (40) ಮೃತಪಟ್ಟವರಾಗಿದ್ದಾರೆ.

ಕಾರಿನಲ್ಲಿದ್ದ ಇನ್ನೋರ್ವ ಹೀರಾರಾಮ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ವಾಹನಗಳೆರಡು ಸಂಪೂರ್ಣವಾಗಿ ಜಖಂಗೊಂಡಿದೆ.

ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News