ಮುಈನುಸ್ಸುನ್ನಃ ಹಾವೇರಿ; ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿಗೆ ಪೊಸೋಟ್ ತಂಙಳ್ ಪುರಸ್ಕಾರ

Update: 2022-07-01 06:49 GMT
ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ

ಹಾವೇರಿ: ಮುಈನುಸ್ಸುನ್ನಃ ವಿದ್ಯಾಸಂಸ್ಥೆ ಸ್ಥಾಪಕಾಧ್ಯಕ್ಷ ಸಯ್ಯಿದ್ ಪೊಸೋಟ್ ತಂಙಳ್ ಹೆಸರಲ್ಲಿ ನೀಡುತ್ತಿರುವ ಪುರಸ್ಕಾರಕ್ಕೆ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಅವರನ್ನು ಆಯ್ಕೆ ಮಾಡಿದೆ.

ರಾಜ್ಯದಲ್ಲಿ ಎಸ್ಎಸ್ಎಫ್ ಸಂಘಟನೆಯನ್ನು ಬಲ ಪಡಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದ ಜಿಎಂ ಉಸ್ತಾದ್, ಮುಂದೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಾಧ್ಯಕ್ಷರಾಗಿ, ಎಸ್‌ವೈಎಸ್ ರಾಜ್ಯಾಧ್ಯಕ್ಷರಾಗಿ ದುಡಿದಿರುವುದಲ್ಲದೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಸದಸ್ಯರಾಗಿಯೂ, ಅಲ್ ಅನ್ಸಾರ್ ಪತ್ರಿಕಾ ಬಳಗದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ, ಭಾಷಣ, ಸಂಘಟನಾ ಕ್ಷೇತ್ರದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಉತ್ತರ ಕರ್ನಾಟಕದ ದಅವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರೂಪದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಪ್ರಸ್ತುತ ಪುರಸ್ಕಾರಕ್ಕೆ ಅವರನ್ನು ಆರಿಸಲಾಗಿದ್ದು, ಈ ಹಿಂದೆ ಎಸ್ಎಸ್ಎಫ್ ರಾಷ್ಟ್ರೀಯ ಅಧ್ಯಕ್ಷ  ಡಾ. ಫಾರೂಕ್ ನಈಮಿ ಯವರಿಗೆ ಪ್ರಸ್ತುತ ಪುರಸ್ಕಾರವನ್ನು ನೀಡಲಾಗಿತ್ತು. ಸಯ್ಯಿದ್ ಪೊಸೋಟ್ ತಂಙಳ್ ರವರ ಮಖಾಂ ಶರೀಫ್ ಬಳಿ ಜಿಎಂ ಉಸ್ತಾದ್ ರವರ ಆಯ್ಕೆಯನ್ನು ಘೋಷಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಖ್, ಜುಲೈ 16ರಂದು ಹಾವೇರಿ ಜಿಲ್ಲೆಯ ಸವನೂರಿನಲ್ಲಿ ನಡೆಯುವ ಮುಈನುಸ್ಸುನ್ನಃ ಸಮ್ಮೇಳನದಲ್ಲಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಮಳ್ಹರ್ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ತಂಙಳ್, ವಾಗ್ಮಿ ನೌಫಲ್ ಸಖಾಫಿ ಕಳಸ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News