ರಾಜ್ಯಾದ್ಯಂತ ಜು.10ರಂದು ಈದುಲ್ ಅಝ್ ಹಾ ಆಚರಣೆ
Update: 2022-07-01 19:02 IST
ಬೆಂಗಳೂರು, ಜು.1: ರಾಜ್ಯಾದ್ಯಂತ ಜು.10ರಂದು ಈದುಲ್ ಅಝ್ ಹಾ(ಬಕ್ರೀದ್ ಹಬ್ಬ) ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ ಎಂದು ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಮಳೆಯ ಕಾರಣದಿಂದಾಗಿ ಬೆಂಗಳೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಕೋಲಾರ ಸೇರಿದಂತೆ ಯಾವುದೆ ಜಿಲ್ಲೆಯಲ್ಲಿ ದುಲ್ ಹಜ್ ಮಾಸದ ಚಂದ್ರ ದರ್ಶನವಾಗಲಿಲ್ಲ. ಆದರೆ, ಚೆನ್ನೈ, ಅಸ್ಸಾಂ, ಬಿಹಾರ ಹಾಗೂ ಆಂಧ್ರಪ್ರದೇಶದಲ್ಲಿ ಚಂದ್ರದರ್ಶನವಾದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜು.10ರಂದು ಈದುಲ್ ಅಝ್ ಹಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.