×
Ad

ಎಟಿಎಂಗೆ ಹಣ ತುಂಬುವ ವಾಹನ, 44 ಲಕ್ಷ ಹಣ ದರೋಡೆ: ಐವರು ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ

Update: 2022-07-01 21:50 IST

ಬೆಂಗಳೂರು, ಜು.1: ಎಟಿಎಂಗೆ ಹಣ ತುಂಬುವ ವಾಹನದ ಸಮೇತ 44 ಲಕ್ಷ ರೂ.ಹಣವನ್ನು ದರೋಡೆ ಮಾಡಿದ್ದ ಐದು ಮಂದಿ ಆರೋಪಿಗಳಿಗೆ ನಗರದ 52ನೆ ಸಿಸಿಎಚ್ ಕೋರ್ಟ್, ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ. 

ಗಂಗಮ್ಮನಗುಡಿ ವ್ಯಾಪ್ತಿಯಲ್ಲಿರುವ ಎಸ್‍ಬಿಐ ಬ್ಯಾಂಕ್‍ನ ಎಟಿಎಂಗೆ 2012ರ ಜು.27ರಂದು ಮಧ್ಯಾಹ್ನ 3.40ರ ವೇಳೆಯಲ್ಲಿ ಹಣ ತುಂಬಿಸಲು ಟಾಟಾ ಸುಮೋ ವಾಹನದಲ್ಲಿ ಬಂದಿದ್ದರು. 

ಈ ಸಂದರ್ಭದಲ್ಲಿ ಆರೋಪಿಗಳು ಏಜೆನ್ಸಿ ಕಣ್ತಪ್ಪಿಸಿ ವಾಹನ ಸಮೇತ 44 ಲಕ್ಷ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಿರ್ಯಾದುದಾರರು ನೀಡಿದ ದೂರಿನ ಅನ್ವಯ ಗಂಗಮ್ಮನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿ, ಪೊಲೀಸರು ಕೋರ್ಟ್‍ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು 5 ಮಂದಿ ಆರೋಪಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News