ಉದಯಪುರ ಹತ್ಯೆ ಪ್ರಕರಣ ಆರೋಪಿಗಳಿಗೆ ಕೋರ್ಟ್‌ ಆವರಣದಲ್ಲಿ ಹಲ್ಲೆ

Update: 2022-07-02 14:24 GMT

ಹೊಸದಿಲ್ಲಿ: ಟೈಲರ್‌ ಕನ್ಹಯ್ಯಾ ಲಾಲ್‌ ಎಂಬಾತನ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಮೇಲೆ ಇಂದು ಕೋರ್ಟ್‌ ಆವರಣದಲ್ಲಿ ದಾಳಿ ನಡೆಸಲಾಗಿದೆ. ಜೈಪುರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸುವ ವೇಳೆ ದೊಡ್ಡ ಗುಂಪೊಂದು ಆರೋಪಿಗಳ ಮೇಲೆ ದಾಳಿ ನಡೆಸಿ ಅವರನ್ನು ಥಳಿಸಿ ಬಟ್ಟೆಗಳನ್ನು ಹರಿದುಹಾಕಿದೆ ಎಂದು ndtv.com ವರದಿ ಮಾಡಿದೆ.

ಕನ್ಹಯ್ಯಾ ಲಾಲ್‌ ಎಂಬ ಟೈಲರ್‌ ಓರ್ವನ ಬಳಿ ಗ್ರಾಹಕನಂತೆ ತೆರಳಿದ್ದ ಆರೋಪಿಗಳು ಆತ ನೂಪುರ್‌ ಶರ್ಮಾಗೆ ಬೆಂಬಲಿಸಿದ್ದಾನೆಂದು ಆತನ ಕತ್ತು ಸೀಳಿ ಕೊಲೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿಯೂ ಆರೋಪಿಗಳು ಬಳಿಕ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್‌ ಅತ್ತಾರಿ ಹಾಗೂ ಗೌಸ್‌ ಮುಹಮ್ಮದ್‌ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಬಳಿಕ ಇನ್ನಿಬ್ಬರನ್ನೂ ಬಂಧಿಸಲಾಗಿತ್ತು.

ನಾಲ್ವರು ಆರೋಪಿಗಳನ್ನು ಇಂದು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಮತ್ತು ಹಲವಾರು ವಕೀಲರು "ಪಾಕಿಸ್ತಾನ್ ಮುರ್ದಾಬಾದ್" ಮತ್ತು "ಕನ್ಹಯ್ಯಾ ಕೆ ಹತ್ಯಾರೋನ್ ಕೋ ಫಾಸಿ ದೋ" (ಕನ್ಹಯ್ಯಾ ಹಂತಕರಿಗೆ ಮರಣದಂಡನೆ ವಿಧಿಸಿ) ಎಂಬ ಘೋಷಣೆಗಳನ್ನು ಕೂಗಿದರು. ನ್ಯಾಯಾಲಯವು ಜುಲೈ 12 ರವರೆಗೆ ಹಂತಕರ ಕಸ್ಟಡಿಯನ್ನು ಎನ್‌ಐಎಗೆ ಇಂದು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News