ತುಳು ಲಿಪಿಗೆ ತಂತ್ರಾಶ ಸಿದ್ಧಗೊಳಿಸಿದ ಜೈ ತುಳುನಾಡು ಸಂಘಟನೆ

Update: 2022-07-02 18:10 GMT

ಬೆಂಗಳೂರು, ಜು.2: ಕರ್ನಾಟಕದ ಉಪಭಾಷೆ ಆಗಿರುವ ತುಳು ಭಾಷೆಗೆ ಇಲ್ಲಿಯವರೆಗೂ ಲಿಪಿ ಇರಲಿಲ್ಲ. ಈಗ ಗೇಣುಸಿರಿ ಎಂಬ ಲಿಪಿಯನ್ನು ಅಭಿವೃದ್ದಿಪಡಿಸಿದ್ದು, ಈ ತಂತ್ರಾಂಶದ ಮೂಲಕ ಬೇರೆ ಭಾಷೆಗಳಂತೆ ತುಳು ಭಾಷೆಗೂ ಲಿಪಿ ಇರಲಿದೆ ಎಂದು ಜೈ ತುಳುನಾಡು ಸಂಘಟನೆ ತಿಳಿಸಿದೆ. 

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಕಾಂತಿ ಶೆಟ್ಟಿ ಮಾತನಾಡಿ, ಇಲ್ಲಿಯವರೆಗೂ ತುಳು ಭಾಷೆಗೆ ಲಿಪಿ ಇರಲಿಲ್ಲ. ಈಗ ಜೈ ತುಳುನಾಡು ಸಂಘಟನೆಯ ಸದಸ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜ್ಞಾನೇಶ್ ದೇರಳಕಟ್ಟೆ ಅವರು ಗೇಣುಸಿರಿ ಎಂಬ ಲಿಪಿಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಾಂಶದ ಸಹಾಯದಿಂದ ತುಳು ಲಿಪಿಯಲ್ಲಿ ಪುಸ್ತಕ ಮುದ್ರಿಸಲು, ಪತ್ರಿಕೆ ಮುದ್ರಿಸಲು, ಆಮಂತ್ರಣ ಪತ್ರಿಕೆ ಮುದ್ರಿಸಲು, ಡಿಜಿಟಲ್ ಮಾಧ್ಯಮದಲ್ಲಿ ಮತ್ತು ಶೈಕ್ಷಣಿಕವಾಗಿ ಲಿಪಿಯನ್ನು ಬೆಳೆಸಲು ತಂತ್ರಾಂಶ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News