×
Ad

ಕಲಬುರಗಿ: ಕಾರುಗಳ ನಡುವೆ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

Update: 2022-07-03 14:05 IST

ಕಲಬುರಗಿ: ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರು ಘಟನೆ ಕಮಲಾಪುರ ಭೀಮನಾಳ ಕ್ರಾಸ್ ಬಳಿ ನಡೆದಿದೆ.

ತೆಲಂಗಾಣದ ಹನಮಕೊಂಡಾ ನಗರದ ಉಜಲಿಬೇಸ ನಿವಾಸಿ ಮಜೀದ್ ಸಿದ್ದೀಖಿ (71) ಹೈದರಾಬಾದಿನ ಬಾಲಾಜಿ ನಗರದ ಸಾದಯಾ ಖುನ್ನಿಸಾ ಬೇಗಂ (55) ಮೃತರು ಎಂದು ಗುರುತಿಸಲಾಗಿದೆ. ಮೂವರು ಗಂಭೀರ ಗಾಯಗೊಂಡಿದ್ದು ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News