ಅಂಗವಿಕಲರ ಪ್ರಮಾಣ ಪತ್ರ ಸಲ್ಲಿಕೆಗೆ ವಿಳಂಬ; ವಿದ್ಯಾರ್ಥಿನಿಗೆ ಎಂಬಿಬಿಎಸ್ ಸೀಟು ನೀಡುವಂತೆ ಹೈಕೋರ್ಟ್ ಆದೇಶ

Update: 2022-07-03 12:35 GMT

ಬೆಂಗಳೂರು, ಜು. 3: ಅಂಗವಿಕಲರ ಪ್ರಮಾಣ ಪತ್ರ ಸಲ್ಲಿಸಲು ಕೆಲವೇ ಕ್ಷಣ ವಿಳಂಬವಾಗಿದೆ ಎಂಬ ಕಾರಣಕ್ಕೆ ವೈದ್ಯಕೀಯ ಸೀಟು ವಂಚಿತಳಾಗಿದ್ದ ವಿದ್ಯಾರ್ಥಿನಿಗೆ ಎಂಬಿಬಿಎಸ್ ಸೀಟು ನೀಡುವಂತೆ ಹೈಕೋರ್ಟ್, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ(ಬಿಮ್ಸ್) ಆದೇಶಿಸಿದೆ.

ಈ ಸಂಬಂಧ ವಿದ್ಯಾರ್ಥಿನಿ ತಜೀನ್ ಇನಾಂದಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಹಲವರ ಜೀವನದಲ್ಲಿ ಕಾಲ ಕೆಲವು ಬಾರಿ ಆಟವಾಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯು ಸಂತ್ರಸ್ತರಾಗಿದ್ದಾರೆ. ಜೇಷ್ಠತೆ ಆಧಾರದಲ್ಲಿ ಅವರು ಪಡೆದಿರುವ ಎಂಬಿಬಿಎಸ್ ಸೀಟನ್ನು ನೀಡಲೇಬೇಕು ಎಂದು ನ್ಯಾಯಪೀಠವು ಆದೇಶಿಸಿದೆ. ಬಡ ಕುಟುಂಬದಿಂದ ಬಂದಿರುವ ಅವರು ವೈದ್ಯೆಯಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ನ್ಯಾಯಪೀಠವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News