ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ: ಶಾಸಕ ತನ್ವೀರ್ ಸೇಠ್ ಆರೋಪ

Update: 2022-07-03 15:00 GMT

ಮೈಸೂರು,ಜು.2: ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದರು.

ಎನ್‍ಆರ್ ಕ್ಷೇತ್ರದ ವಾರ್ಡ್ ಸಂಖ್ಯೆ 35 ರಲ್ಲಿ 2.25ಕೋಟಿ ರೂ. ವೆಚ್ದದ ಅಭಿವೃದ್ಧಿ ಕಾಮಗಾರಿಗಳಿಗೆ ರವಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ವಾರ್ಡಿನಲ್ಲಿ ಹೊಸ ಬಡಾವಣೆಗಳು ಹೆಚ್ಚಾಗಿವೆ. ಇಲ್ಲಿನ ಹಿರಿಯ ನಾಗರಿಕರಿಗೆ ವಾಕಿಂಗ್ ಟ್ರ್ಯಾಕ್, ಜಿಮ್ ಸೇರಿದಂತೆ ಇತರೆ ಪಾರ್ಕ್ ಅಭಿವೃದ್ಧಿ, ರಸ್ತೆ ಒಳಚರಂಡಿ, ಕುಡಿಯುವ ನೀರು ಇನ್ನಿತರ ಕಾಮಗಾರಿಗಳಿಗೆ ಒಟ್ಟು 2.25 ಕೋಟಿ ರೂ. ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಅಭಿವೃದ್ಧಿಗೆ ಹಣ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು. ಮತದಾರರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನಾದರೂ ಒದಗಿಸದಿದ್ದರೆ ಹೇಗೆ? ಮೈಸೂರಿನ ಎರಡು ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಅನುದಾನ ನೀಡಿ ಉಳಿದ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗಿದೆ. ಇಂತಹ ರಾಜಕಾರಣ ಮಾಡಬಾ ರದು ಎಂದು ಸರ್ಕಾರದ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News