ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಲು ಅನುದಾನ ಬಿಡುಗಡೆ

Update: 2022-07-03 17:10 GMT

ಬೆಂಗಳೂರು, ಜು. 3: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾದ ಉಪನ್ಯಾಸಕರಿಗೆ ಜೂನ್ ಮತ್ತು ಜುಲೈ ತಿಂಗಳ ಗೌರವಧನವನ್ನು ಪಾವತಿ ಮಾಡಲು ರಾಜ್ಯ ಸರಕಾರವು 47.42ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ.

ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯಿಂದ ಅನುಮೋದನೆ ಆಗಿರುವ ಅತಿಥಿ ಉಪನ್ಯಾಸಕರಿಗೆ ಮಾತ್ರ ಪಾವತಿ ಮಾಡಬೇಕು. ಅನುಮೋದನೆಗೊಳ್ಳದೆ ಇರುವವರಿಗೆ ಗೌರವಧನವನ್ನು ಪಾವತಿ ಮಾಡದೆ ಇದ್ದಲ್ಲಿ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಹೆಚ್ಚುವರಿ ವಿಭಾಗವನ್ನು ತೆರೆದು ಹೆಚ್ಚಿನ ಕಾರ್ಯಭಾರವನ್ನು ತೋರಿಸಿ ಅಥವಾ ಹೆಚ್ಚುವರಿ ಕಾರ್ಯಬಾರ ಲೆಕ್ಕಚಾರ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಗೌರವಧನ ಪಾವತಿಸಿದ್ದಲ್ಲಿ ಸಂಬಂಧಿಸಿದ ಪ್ರಾಶುಪಾಲರು ಮತ್ತು ಸಂಬಂಧಿಸಿದವರು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. 

ಬಿಡುಗಡೆ ಮಾಡಲಾದ ಅನುದಾನವನ್ನು ಯಾವುದೇ ಕಾರಣಕ್ಕೂ ವಿತರಿಸದೇ ಉಳಿಸಿಕೊಂಡು ಅತಿಥಿ ಉಪನ್ಯಾಸಕರಿಂದ ದೂರು ಬಂದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರನ್ನು ಹೊಣೆ ಮಾಡಲಾಗುವುದು. ಅನುದಾನವನ್ನು ಜೂನ್, ಜುಲೈ ತಿಂಗಳಿಗೆ ಗೌರವಧನವನ್ನು ಪಾವತಿಸಭೆಕು, ಹೊರತಾಗಿ ಹಿಂದಿನ ಸಾಲಿನ ಅವಧಿಗೆ ಪಾವತಿ ಮಾಡಿದ್ದ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News