ಸುಪ್ರೀಂ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ: ಪೀಪಲ್ಸ್ ಲಾಯರ್ಸ್ ಗಿಲ್ಡ್

Update: 2022-07-03 18:16 GMT

ದಾವಣಗೆರೆ : ಸರ್ವೋಚ್ಛ ನ್ಯಾಯಾಲಯವು ನೂಪುರ್ ಶರ್ಮಾ ರವರು ನೀಡಿರುವ ಅವಹೇಳನಕಾರಿ ಹೇಳಿಕೆಯ ಬಗ್ಗೆ ಚಾಟಿ ಬೀಸಿ ದೇಶದಲ್ಲಿ ಯಾರು ಸರ್ವಾಧಿಕಾರಿಗಳಲ್ಲ ನ್ಯಾಯಾಲಯಗಳು ಪ್ರಜಾ-ಪ್ರಭುತ್ವ ವ್ಯವಸ್ಥೆಯಲ್ಲಿ ಇನ್ನೂ ಗಟ್ಟಿಯಾಗಿ ನಿಂತಿವೆ.  ಯಾವುದೇ ವ್ಯಕ್ತಿ ಅಧಿಕಾರದಲ್ಲಿ ಇದ್ದ ತಕ್ಷಣ ಮನಬಂದಂತೆ ನಡೆದುಕೊಳ್ಳಲು ಪ್ರಜಾ-ಪ್ರಭುತ್ವದಲ್ಲಿ ಸಾಧ್ಯವಿಲ್ಲ, ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂಬ ಅಂಶವನ್ನು ಎತ್ತಿ ಹಿಡಿದಿರುವುದು ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಹೆಚ್ಚಿಸಿದೆ. ಆದರೆ ತನಗೆ ಅನುಕೂಲವಾಗಲಿಲ್ಲ ಎಂದ ತಕ್ಷಣ ನ್ಯಾಯಾಂಗದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗಿಲ್ಡ್,  ನೂಪುರ್ ಶರ್ಮಾ ರವರ ತೀರ್ಪು ಬಂದ ನಂತರದಲ್ಲಿ ಕೆಲವು ಬಲಪಂಥೀಯರು (ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಕರಾಳ ದಿನ) ಎಂದು ಹ್ಯಾಷ್‍ಟ್ಯಾಗನ್ನು ಟ್ರೆಂಡ್ ಮಾಡಿದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪರ್ದಿವಾಲಾರವರನ್ನು `` ಷರೀಯಾ ನ್ಯಾಯಾಧೀಶರು '' ಎಂದು, ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಮರ್ಥ, ಎಲ್ಲಾ ಮಿತಿಗಳನ್ನು ಮೀರಿದ ಈ ಷರೀಯಾ ನ್ಯಾಯಾಧೀಶರು ಇವರ ವಿರುದ್ಧ ಬಿ.ಜೆ.ಪಿ ಸರ್ಕಾರ ದೋಷರೋಪಣೆಯನ್ನು ಪ್ರಾರಂಭಿಸಬೇಕು.  ಭಯೋದ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ ಎಂದೆಲ್ಲ ಅವಹೇಳನಕಾರಿಯಾಗಿ ಆರೋಪ ಮಾಡಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿರುವ ಅಪಮಾನ. ಇದನ್ನು ಜನ ಸಾಮಾನ್ಯರು ಪ್ರಜಾ-ಪ್ರಭುತ್ವದ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತೀವ್ರವಾಗಿ ಖಂಡಿಸಬೇಕಾಗಿದೆ ಎಂದು  ಪೀಪಲ್ಸ್ ಲಾಯರ್ಸ್ ಗಿಲ್ಡ್ ರಾಜ್ಯ ಸಂಚಾಲಕ ಅನೀಸ್ ಪಾಷ ಹೇಳಿದ್ದಾರೆ.  

ನ್ಯಾಯಾಂಗವನ್ನು ಅಭದ್ರಗೊಳಿಸಿದರೆ, ಇಡೀ ದೇಶದ ಆಡಳಿತ ಯಂತ್ರವು ಹಾಳಾಗಿ ಪ್ರಜಾ-ಪ್ರಭುತ್ವ ಸರ್ವನಾಶವಾಗುವುದು. ದೇಶದ ಶಾಸಕಾಂಗ ಮತ್ತು ಕಾರ್ಯಾಂಗವು ದಾರಿ ತಪ್ಪುತ್ತಿರುವ ಈ ಕಾಲಘಟ್ಟದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಸುಭದ್ರಗೊಳಿಸಬೇಕಾಗಿದೆ ಹೊರೆತು ತನ್ನ ಪರವಾಗಿ ತೀರ್ಪು ಬರಲಿಲ್ಲ ಎಂದ ತಕ್ಷಣ ನ್ಯಾಯಾಂಗದ ವಿರುದ್ಧವೇ ಧ್ವನಿ ಎತ್ತುವುದು ನ್ಯಾಯಾಂಗ ನಿಂಧನೆಯಾಗುತ್ತದೆ. ಯಾರೇ ವ್ಯಕ್ತಿಗೆ ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡಲು ಅವಕಾಶವಿದೆ ಆದರೆ ಅದರ ಬಗ್ಗೆ ಕೀಳಾಗಿ ಮಾತನಾಡಲು ಸಂವಿಧಾನವು ಅವಕಾಶ ನೀಡುವುದಿಲ್ಲ.   ಕೇಂದ್ರ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ನಿಂದನೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ದೇಶದ ವ್ಯವಸ್ಥೆಯನ್ನು ಭದ್ರಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News