ದಕ್ಷಿಣದಲ್ಲಿ ಕುಟುಂಬ ರಾಜಕಾರಣದ ಕೊಂಡಿಗಳು ಕಳಚಿಕೊಳ್ಳಬಹುದೆಂಬ ಭೀತಿಯೇ?: ಕುಮಾರಸ್ವಾಮಿಗೆ BJP ಪ್ರಶ್ನೆ
ಬೆಂಗಳೂರು: ‘ರಾಹುಲ್ ಗಾಂಧಿಯ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದು ಹಿಂದೆ ಎಚ್‍ಡಿಕೆ ಕುಳಿತಲ್ಲೇ ನಡುಬಗ್ಗಿಸಿದ್ದನ್ನು ಜಗತ್ತು ಗಮನಿಸಿದೆ ಎಂದು ಬಿಜೆಪಿ ಹೇಳಿದೆ.
'ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ 'ಸತ್ತಸೊಂಟದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದೇ ಪ್ರಜಾಪ್ರಭುತ್ವವೇ? ಎಂದು ಪ್ರಶ್ನಿಸಿದ್ದ' ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಗೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
'ಕುಮಾರಸ್ವಾಮಿಯವರೇ, ಲೋಕದ ಡೊಂಕು ತಿದ್ದುವ ಮುನ್ನ ನಿಮ್ಮ ತಪ್ಪುಗಳನ್ನು ಮೊದಲು ಗಮನಿಸಿಕೊಳ್ಳಿ. ಇಲ್ಲವಾದರೆ ಜಗತ್ತಿನ ಆಗು ಹೋಗುಗಳ ಬಗ್ಗೆ ಕಣ್ಣು-ಕಿವಿ ತೆರೆದುಕೊಳ್ಳಬಹುದು. ಮಿಷನ್ ದಕ್ಷಿಣ್ ಎಂಬುದು ಬಿಜೆಪಿ ಪಕ್ಷದ ಆಂತರಿಕ ಕಾರ್ಯಕ್ರಮ' ಎಂದು ಹೇಳಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಸಂಕಲ್ಪ ಮಾಡುತ್ತಿದ್ದಂತೆ ಎಚ್‍ಡಿಕೆ ಅವರಿಗೇಕೆ ನಡುಕ? ಕುಟುಂಬ ರಾಜಕಾರಣದ ಕೊಂಡಿಗಳು ದಕ್ಷಿಣದಲ್ಲಿ ಕಳಚಿಕೊಳ್ಳಬಹುದೆಂಬ ಭೀತಿಯೇ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ರಾಹುಲ್ ಗಾಂಧಿಯ ಕೃಪೆಯಿಂದ ಮುಖ್ಯಮಂತ್ರಿಯಾದೆ ಎಂದು ಹಿಂದೆ @hd_kumaraswamy ಕುಳಿತಲ್ಲೇ ನಡುಬಗ್ಗಿಸಿದ್ದನ್ನು ಜಗತ್ತು ಗಮನಿಸಿದೆ.
— BJP Karnataka (@BJP4Karnataka) July 5, 2022
ಕುಮಾರಸ್ವಾಮಿಯವರೇ, ಲೋಕದ ಡೊಂಕು ತಿದ್ದುವ ಮುನ್ನ ನಿಮ್ಮ ತಪ್ಪುಗಳನ್ನು ಮೊದಲು ಗಮನಿಸಿಕೊಳ್ಳಿ. ಇಲ್ಲವಾದರೆ ಜಗತ್ತಿನ ಆಗು ಹೋಗುಗಳ ಬಗ್ಗೆ ಕಣ್ಣು- ಕಿವಿ ತೆರೆದುಕೊಳ್ಳಬಹುದು. #LuckyDipCMHDK pic.twitter.com/vv7C5EUyC7