×
Ad

ನಾಟಕ ಪ್ರದರ್ಶನದಲ್ಲೂ ಜಾತಿಯ ವಿಷಬೀಜ ಬಿತ್ತುವುದು ವಿಷಾದನೀಯ: ಪಂಡಿತಾರಾಧ್ಯಶ್ರೀ

Update: 2022-07-05 23:46 IST

ಹೊಸದುರ್ಗ,  ಜು.5: ನಾಟಕ ಪ್ರದರ್ಶನದಲ್ಲೂ ಜಾತಿಯ ವಿಷಬೀಜ ಬಿತ್ತುವುದು ವಿಷಾದನೀಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ರಂಗಭೂಮಿ ನಾಡಿನ ಜನರ ನಾಡಿಮಿಡಿತದ ಪ್ರತೀಕ. ಸಮಾಜದ ಬದುಕಿಗೆ ಹಿಡಿದ ಕನ್ನಡಿ. ಇತ್ತೀಚಿನ ದಿನಗಳಲ್ಲಿ ನಾಟಕ ಪ್ರದರ್ಶನದಲ್ಲೂ ಜಾತಿಯ ವಿಷಬೀಜ ಬಿತ್ತುವ ಅಸಾಂಸ್ಕೃತಿಕ ಮನಸ್ಸುಗಳು ಹೆಚ್ಚುತ್ತಿರುವುದು ಸರಿಯಲ್ಲ. ರಂಗಭೂಮಿಯಲ್ಲೂ ರಾಜಕೀಯ ನುಸುಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನದ ಆಶಯಗಳಿಗೆ ಮಸಿಬಳಿಯುವ ಕಾರ್ಯ. ಇಂತಹ ನೀಚ ಪ್ರವೃತ್ತಿಯನ್ನು ಪ್ರಜ್ಞಾವಂತರು ಪ್ರತಿಭಟಿಸಬೇಕು ಎಂದು ಸ್ವಾಮೀಜಿ ಅವರು ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News