ಕಲಬುರಗಿ: ಗೋಹತ್ಯೆ ಕಾಯ್ದೆ ದುರುಪಯೋಗ ತಡೆಗೆ ಆಗ್ರಹಿಸಿ ದಲಿತ ಸೇನೆಯಿಂದ ಪ್ರತಿಭಟನೆ

Update: 2022-07-06 14:38 GMT

ಕಲಬುರಗಿ: ಪೊಲೀಸ್ ಅಧಿಕಾರಿಗಳು ಗೋಹತ್ಯೆ ನಿಷೇದ ಮತ್ತು ಸಂರಕ್ಷಣಾ ಕಾಯ್ದೆಯ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ಜಗತ್ ವೃತದಿಂದ ಪೊಲೀಸ್ ಆಯುಕ್ತರ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿದ ದಲಿತ ಸೇನೆಯ ನ್ಯಾಯವಾದಿ ಹಣಮಂತ ಯಳಸಂಗಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಿ ಒತ್ತಾಯಿಸಿದರು.

ಜಿಲ್ಲಾದ್ಯಂತ ಬಡ ರೈತರನ್ನು ಗುರಿಯಾಗಿಸಿಕೊಂಡು, ಜಾನುವಾರುಗಳನ್ನು ಜಪ್ತಿ ಮಾಡಿ ಕೊಂಡು ರೈತರು ಹಾಗೂ ಒಂದು ಸಮುದಾಯದ ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಅಸಮಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಸ್.ಡಿಪಿಐ ಪಕ್ಷದ ಮುಖಂಡರು ಸೇರಿದಂತೆ ನ್ಯಾಯವಾದಿ ಮಜಹರ್ ಹುಸೇನ್ ಇದ್ದರು.

ಇದೇ 14 ರಂದು ನಗರಕ್ಕೆ ಆಗಮಿಸುವ ಎಡಿಜಿಪಿ ಅಲೋಕಕುಮಾರರಿಗೆ ಸಹ ಮನವಿ ಸಲ್ಲಿಸಲಾಗುವದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದ್ದು, ದಲಿತ ಸೇನೆಯ ಮಂಜುನಾಥ ಭಂಡಾರಿ, ಮಜರ್ ಅಡ್ವೋಕೇಟ್, ಅಲೀಂ ಇಲಾಹಿ,ಕಲೀಂ ಅಡ್ವೋಕೇಟ್ ಸೇರಿದಂತೆ ಹಲವರು ಭಾಗವಹಿಸಿದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News