ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಸ್ವಾಗತಾರ್ಹ: ನಿರಂಜನಾರಾಧ್ಯ ವಿ.ಪಿ.

Update: 2022-07-08 15:57 GMT

ಬೆಂಗಳೂರು: ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಅನ್ನು ಖರೀದಿಸಲು 132 ಕೋಟಿ ಹಣವನ್ನು ಬಿಡುಗಡೆ ಮಾಡಿ ಸರಕಾರಿ ಆದೇಶ ಹೊರಡಿಸಿದ ಸರಕಾರದ ಹಾಗೂ ಮುಖ್ಯಮಂತ್ರಿ ಅವರ ತೀರ್ಮಾನ ಸ್ವಾಗತಾರ್ಹವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ. 

ಈ ಮೂಲಕ ಸರಕಾರಿ ಶಾಲಾ ಮಕ್ಕಳು ಉಳಿದ ಖಾಸಗಿ ಶಾಲೆಗಳ ಮಕ್ಕಳಂತೆಯೇ ಸ್ವಾಭಿಮಾನದ ಗೌರವಯುತ ಕಲಿಕಾ ವಾತಾವರಣದಲ್ಲಿ ಕಲಿಯುವ ಭೂಮಿಕೆಯನ್ನು ಹಾಗು ಸಂವಿಧಾನದ ಮೂಲಭೂತ ಹಕ್ಕನ್ನು ಎತ್ತಿಹಿಡಿದಂತಾಗಿದೆ. ಸರಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶೂ ಮತ್ತು ಸಾಕ್ಸ್‍ನ್ನು ನೀಡಲು ಎಸ್‍ಡಿಎಂಸಿಗಳು ಕ್ರಮವಹಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಶಿಕ್ಷಣ ಇಲಾಖೆಯು 46.37 ಲಕ್ಷ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ ಹಾಗೂ ಸಾಕ್ಸ್ ಅಥವಾ ಸ್ಯಾಂಡಲ್‍ಗಳನ್ನು ವಿತರಿಸಲು 132 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. 


-

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News