ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ 3 ವರ್ಷ ಶೂನ್ಯ ದಾಖಲಾತಿ ಇದ್ದರೂ, ಮಾನ್ಯತೆ: ಶಿಕ್ಷಣ ಇಲಾಖೆ

Update: 2022-07-08 16:06 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.8: ಖಾಸಗಿ ಶಾಶ್ವತ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪೈಕಿ 2019-20, 2020-21 ಮತ್ತು 2021-22ನೇ ಸಾಲುಗಳಲ್ಲಿ ಕೋವಿಡ್-19ರ ಕಾರಣಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಸ್ಥಗಿತಗೊಂಡಿದ್ದ ಕಾಲೇಜುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮಾನ್ಯತೆಯನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ.

ಶೂನ್ಯ ದಾಖಲಾತಿಗಳನ್ನು ಹೊಂದಿರುವ ಖಾಸಗಿ ಶಾಶ್ವತ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಲು ಉಲ್ಲೇಖ 05ರಲ್ಲಿ ಸರಕಾರವು ಅನುಮೋದನೆ ನೀಡಿರುತ್ತದೆ.

ಹಾಗಾಗಿ, ಒಂದು ಬಾರಿಗೆ ವಿನಾಯ್ತಿ ನೀಡಿ 2022-23ನೇ ಸಾಲಿಗೆ ಕಾಲೇಜನ್ನು ಪುನಃ ಪ್ರಾರಂಭಿಸಲು ಇಚ್ಛಿಸಿದಲ್ಲಿ ಪ್ರಸ್ತಾವನೆಯನ್ನು, ದಾಖಲೆಗಳೊಂದಿಗೆ ಖುದ್ದಾಗಿ ನಿರ್ದೇಶನಾಲಯಕ್ಕೆ ಜು.16 ಒಳಗೆ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ, ಅರ್ಹ ಪ್ರಸ್ತಾವನೆಗಳಿಗೆ ಅನುಮತಿ ನೀಡಲು ಕ್ರಮವಹಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News