ಜು.22ರವರೆಗೆ ದ್ವಿತೀಯ ಪಿಯುಸಿಗೆ ದಾಖಲಾತಿಗೆ ಅವಕಾಶ

Update: 2022-07-08 17:15 GMT

ಬೆಂಗಳೂರು, ಜು.8: 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಗೆ ದಾಖಲಾಗುವ ದಿನಾಂಕವನ್ನು (ವಿಶೇಷ ದಂಡ ಶುಲ್ಕದೊಂದಿಗೆ) ಜು.8ವರೆಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ದಿನಾಂಕವನ್ನು ಜು.22ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ. 

ವಾರ್ಷಿಕವಾಗಿ ಕನಿಷ್ಠ 75 ಶೇಕಡ ಹಾಜರಾತಿಯ ಅವಶ್ಯಕತೆ ಇರುವುದರಿಂದ ಈ ದಿನಾಂಕವನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಪಿಯುಸಿ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ದಾಖಲಾತಿ ಶುಲ್ಕಗಳನ್ನು ಸಂಗ್ರಹಿಸಿ, ಶುಲ್ಕಗಳನ್ನು ಖಜಾನೆಗೆ ಕಡ್ಡಾಯವಾಗಿ ಜಮಾ ಮಾಡುವ ಬಗ್ಗೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News