×
Ad

ಸಿದ್ದರಾಮಯ್ಯ ಈ ಬಾರಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ: ಬಿಜೆಪಿ

Update: 2022-07-09 12:42 IST

ಬೆಂಗಳೂರು: ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ.  ಮುಂದೆ ನೀವು ಚುನಾವಣೆಗೆ ನಿಲ್ಲಬಹುದು ಆದರೆ ಗೆಲ್ಲಲು ಸಾಧ್ಯವಿಲ್ಲ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಎಚ್ಚರಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ,  'ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ. ನಿಮ್ಮ 'ಕೊನೆಯ' ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇದು ನಮ್ಮ ಮಾತಲ್ಲ,‌ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ ಎಂದು ಹೇಳಿದೆ.

''ಸಿದ್ದರಾಮಯ್ಯನವರೇ ಈ ಬಾರಿ ನೀವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ಇದೇ ನಿಮ್ಮ ಕೊನೆಯ ಚುನಾವಣೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೆ ನಿಮ್ಮ ಸೋಲಿಗೆ ಯೋಗದಾನ ನೀಡುವವರು ನಿಮ್ಮ ಪಕ್ಷದಲ್ಲೇ ಇದ್ದಾರೆ ಎಂಬುದನ್ನು ಮರೆಯಬೇಡಿ'' ಎಂದು ಬಿಜೆಪಿ ಟ್ವೀಟ್ ಮಾಡಿದೆ.

'ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಿದ್ದರಾಯರದ್ದು ಅದೇ ರಾಗ, ಅದೇ ಹಾಡು. ಇದೇ ನನ್ನ ಕೊನೆಯ ಚುನಾವಣೆ ಎನ್ನುವುದು ಅಭ್ಯಾಸವಾಗಿ ಬಿಟ್ಟಿದೆ. ಹೀಗೇ ಹೇಳುತ್ತಿರಿ, ಜನರೇ ನಿಮ್ಮ ರಾಜಕೀಯಕ್ಕೆ ಅಂತ್ಯ ಹಾಡುತ್ತಾರೆ. ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಜೀವದಾನ ಪಡೆದಿರಿ. ಮುಂದೆ ನಿಮ್ಮವರೂ ನಿಮ್ಮನ್ನು ಕಾಪಾಡಲಾರರು!' ಎಂದು ಬಿಜೆಪಿ ಕುಟುಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News