×
Ad

ಏನೇ ಆದರೂ ಎಲ್ಲರೂ ಗೃಹಸಚಿವರದ್ದೇ ರಾಜೀನಾಮೆ ಕೇಳೋದು, ಏನೂ ಮಾಡೋಣ: ಆರಗ ಜ್ಞಾನೇಂದ್ರ

Update: 2022-07-09 13:16 IST

ಶಿವಮೊಗ್ಗ, ಜು.9: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸೇರಿದಂತೆ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಏನೇ ಆದರೂ ಸಹ ಎಲ್ಲರೂ ಗೃಹಸಚಿವರದ್ದೇ ರಾಜೀನಾಮೆ ಕೇಳೋದು, ಏನೂ ಮಾಡೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

 ಹರ್ಷ ಹತ್ಯೆ ವಿಚಾರವಾಗಿ ಮಾತನಾಡಲು ಬಂದ ಹರ್ಷನ ಸಹೋದರಿಯನ್ನು ಗೃಹ ಸಚಿವರು ಗದರಿಸಿದ್ದಾರೆ ಎಂಬ ಆರೋಪದ ಕುರುತಂತೆ ಮಾತನಾಡಿದ ಗೃಹಸಚಿವರು, ನಾನು ಹರ್ಷನ ಕುಟುಂಬದೊಂದಿಗಿದ್ದೇನೆ. ಆದರೆ ಗೃಹ ಸಚಿವನಾಗಿ ನನಗೆ ನನ್ನದೇ ಆದ ಇತಿಮಿತಿಗಳಿವೆ. ಅವರು ಕೇಳುವ ಪ್ರತೀ ವಿಷಯಕ್ಕೂ ಉತ್ತರಿಸಲಾರೆ ಎಂದರು.

ಹರ್ಷ ಕುಟುಂಬದ ಆಕ್ರೋಶದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ನಮ್ಮ ಬಳಿ ಮಾತನಾಡಿದಾಗ ಸಮಾಧಾನವಾಗಿಯೇ ಮಾತನಾಡಿದ್ದೇನೆ. ಅವರು ಶ್ರೀರಾಮ ಸೇನೆಯ 20ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಂದಿದ್ದರು. ಅವರಿಗೂ ಅವರಿಗೂ ಸಹ ಹರ್ಷನ ಅಕ್ಕನ ವರ್ತನೆಯಿಂದ ಬೇಜಾರಾಗಿದೆ ಎಂದರು.

ಪರಪ್ಪನ ಅಗ್ರಹಾರದಿಂದ ಹರ್ಷ ಕೊಲೆ ಆರೋಪಿಗಳು ಮೊಬೈಲ್ ಕರೆಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ವಿರುದ್ದ ಎಫ್ಐ ಆರ್ ದಾಖಲಿಸಲಾಗಿದೆ. ಕ್ರಮ ನಿಶ್ಚಿತವಾಗಿ ಜರುಗಲಿದೆ ಎಂದರು.

ರಾಜ್ಯದ ಅಮರನಾಥ ಯಾತ್ರಿಗಳನ್ನು ಕರೆತರಲು ತಂಡ ರಚಿಸಲಾಗಿದೆ. ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅತಿ ವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಸರಕಾರ ಗಮನಹರಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News