ಮಡಿಕೇರಿ | ಗಾಳಿಬೀಡು ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ, ಮನೆ ನೆಲಸಮ
Update: 2022-07-09 14:25 IST
ಮಡಿಕೇರಿ, ಜು.9: ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 6 ಇಂಚಿಗೂ ಅಧಿಕ ಮಳೆಯಾಗಿದೆ. ಪ್ರಸಕ್ತ ವರ್ಷ ಇಲ್ಲಿಯವರೆಗೆ 79 ಇಂಚು ಮಳೆ ಸುರಿದಿದ್ದು, ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾಗಿದೆ.
ಈ ಪ್ರದೇಶದ ಸುತ್ತಮುತ್ತಲ ಗ್ರಾಮಗಳ ಜಲಮೂಲಗಳು ತುಂಬಿ ಹರಿಯುತ್ತಿದ್ದು, ಗದ್ದೆ ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಈ ಭಾಗದ ಒಂದನೇ ಮೊಣ್ಣಂಗೇರಿ ಗ್ರಾಮದಲ್ಲಿ ಭಾರೀ ಮಳೆಗೆ ಹಳೆಯ ಮನೆಯೊಂದು ನೆಲಸಮವಾಗಿದೆ. ಇದು ಐರಿರ ಸುಬ್ರಮಣಿ ಎಂಬುವವರಿಗೆ ಸೇರಿದ ಮನೆಯಾಗಿದ್ದು, ನಿವಾಸಿಗಳು ಪಕ್ಕದಲ್ಲಿದ್ದ ಮತ್ತೊಂದು ಮನೆಯಲ್ಲಿ ವಾಸವಿದ್ದ ಕಾರಣ ಅನಾಹುತ ತಪ್ಪಿದೆ.