×
Ad

ಹರ್ಷನ ತಾಯಿ, ಸಹೋದರಿಯ ನ್ಯಾಯದ ಕಣ್ಣೀರಿಗೆ ಬಿಜೆಪಿ-ಸಂಘಪರಿವಾರದಿಂದ ಧಮ್ಕಿ: ಬಿ.ಕೆ ಹರಿಪ್ರಸಾದ್

Update: 2022-07-09 17:48 IST

ಬೆಂಗಳೂರು, ಜು.9: ಶಿವಮೊಗ್ಗದ ಹರ್ಷನ ಕೊಲೆಯಲ್ಲಿ ಬೇಳೆ ಬೇಯಿಸಿಕೊಂಡ ಬಿಜೆಪಿ ಮತ್ತು ಪರಿವಾರ ಮೊಸಳೆ ಕಣ್ಣೀರು ಹಾಕಿತ್ತು. ಈಗ ಹರ್ಷನ ತಾಯಿ ಹಾಗೂ ಸಹೋದರಿಯ ನ್ಯಾಯದ ಕಣ್ಣೀರಿಗೆ ಧಮ್ಕಿ ಹಾಕುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಅಮಾಯಕ ಯುವಕರು ಇಷ್ಟಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ಸಂಘಪರಿವಾರದ ಉನ್ಮಾದದ ಕುಲುಮೆಯಲ್ಲಿ ನಿಮ್ಮ ಜೀವ ಕುಯ್ಲಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬ ಅಸಮಾಧಾನ ಹೊರಹಾಕಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News