ಅಮರನಾಥ ಯಾತ್ರೆಗೆ ತೆರಳಿದ್ದ ಮೈಸೂರಿನ ವಕೀಲರ ತಂಡ ಸುರಕ್ಷಿತ
Update: 2022-07-09 19:43 IST
ಮೈಸೂರು,ಜು.9: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಶನಿವಾರ ಸಂಜೆ ಮೇಘಸ್ಪೋಟವಾಗಿದ್ದು ಮೈಸೂರಿನಿಂದ ಅಮರನಾಥ್ ಗೆ ತೆರಳಿದ್ದ ವಕೀಲರ ತಂಡ ಸುರಕ್ಷಿತವಾಗಿದೆ.
ಮೈಸೂರಿನಿಂದ ಅಮರನಾಥ್ ಗೆ ಹತ್ತು ಮಂದಿ ವಕೀಲರು ತೆರಳಿದ್ದರು. ನಿನ್ನೆ ಭಾರೀ ಮೇಘ ಸ್ಪೋಟವಾಗಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಮೈಸೂರು ವಕೀಲರ ತಂಡ ಅಮರನಾಥದಿಂದ ಸುರಕ್ಷಿತ ಜಾಗಕ್ಕೆ ತೆರಳಿದೆ ಎಂದು ತಿಳಿದು ಬಂದಿದ್ದು ಮೈಸೂರಿಗೆ ವಾಪಾಸಾಗುತ್ತಿದ್ದಾರೆ.