ಸಾಗರ:ಮಳೆ ಹಿನ್ನೆಲೆಯಲ್ಲಿ ಸರಳವಾಗಿ ಬಕ್ರೀದ್ ಆಚರಣೆ

Update: 2022-07-10 06:48 GMT

ಸಾಗರ : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಸಾಗರ ತಾಲ್ಲೂಕಿನಾದ್ಯಂತ ರವಿವಾರ ಮಳೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ವಿಪರೀತ ಮಳೆ ಹಿನ್ನೆಲೆಯಲ್ಲಿ  ಮಸೀದಿಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಮರು ಹಬ್ಬ ಆಚರಿಸಿದರು.

ನಗರದ ಬದ್ರಿಯಾ ಮಸೀದಿಯಲ್ಲಿ ಮೌಲಾನ ಅಬ್ದುರ್ರಹ್ಮಾನ್ ಸಖಾಫಿ ನೇತೃತ್ವದಲ್ಲಿ ಪ್ರಾರ್ಥನೆ  ಸಲ್ಲಿಸಲಾಯಿತು.

ಉಳಿದಂತೆ ಆಝಾದ್ ಮಸೀದಿ,ಅಲ್ ಅಮೀನ್ ಮಸೀದಿ,ಮಹಮ್ಮದೀಯ ಮಸೀದಿ,ಗ್ರಾಮೀಣ ಪ್ರದೇಶಗಳಾದ ಜೋಗ,ಕಾರ್ಗಲ್, ತಾಳಗುಪ್ಪ,ಆನಂದಪುರ,ತ್ಯಾಗರ್ತಿ ಸೇರಿದಂತೆ ಇತರೆಡೆಯೂ ಪ್ರಾರ್ಥನೆ ಮಾಡಲಾಯಿತು.  ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ವೇಳೆ ಮಕ್ಕಳು, ವೃದ್ಧರು ಹಾಗೂ ಯುವಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಟಿಪ್ ಟಾಪ್ ಬಷೀರ್,ತಸ್ರೀಫ್ ಇಬ್ರಾಹಿಂ,ಸೈಯ್ಯದ್ ಜಾಕಿರ್,ಪ್ರಮುಖರಾದ ಹುಸೇನ್ ಸಾಬ್,ಸೈಯ್ಯದ್ ಇಕ್ಬಾಲ್,ಮುಹಮ್ಮದ್ ಹಾಜಿ,ಮುಹಮ್ಮದ್ ಖಾಸಿಂ,ಮಕ್ಬೂಲ್ ಅಹಮದ್,ಮನ್ಜೂರ್ ಅಲಿಖಾನ್,ಕೆ.ಅಬ್ದುಲ್ ಶುಕೂರ್,ಹೆಚ್.ಕೆ.ಹೆಚ್ ಮಜೀದ್,ಸೈಯ್ಯದ್ ತಾಹಿರ್,ಸೈಯ್ಯದ್ ಜಮೀಲ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News