×
Ad

ಮೂಗಿನ ಕೆಳಗೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿರುವುದೇಕೆ?: ಡಿ.ಕೆ. ಶಿವಕುಮಾರ್

Update: 2022-07-10 17:22 IST

ಬೆಂಗಳೂರು: 'ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೆಳೆ ವಿಮೆ ಯೋಜನೆಯು ಸಾಕ್ಷಿ ಹೇಳುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 

 ಈ ಸಂಬಂಧ ಟ್ವೀಟ್ ಮಾಡಿರುವ ಅವರು,  'ನಿಮ್ಮ ಸಂತೋಷವನ್ನೂ ವಿಮೆಗೆ ಒಳಪಡಿಸಲಾಗಿದೆ' ಇದು ಕೇಂದ್ರ ಸರ್ಕಾರದ ಪ್ರತಿಷ್ಠಿತ ಬೆಳೆ ವಿಮೆ ಯೋಜನೆಯ ಘೋಷ ವಾಕ್ಯ. ವಾಸ್ತವದಲ್ಲಿ ಇದು ಅನ್ನದಾತರ ಸಂತೋಷವನ್ನೇ ಕಸಿದುಕೊಂಡಿದೆ. ಕಳ್ಳರ ಸಂತೆಯಲ್ಲಿ ಎಲ್ಲರೂ ಪಿಕ್‌ಪಾಕೆಟ್‌ ಮಾಡುವವರೇ, ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೆಳೆ ವಿಮೆ ಯೋಜನೆಯು ಸಾಕ್ಷಿ ಹೇಳುತ್ತಿದೆ' ಎಂದು ಹೇಳಿದ್ದಾರೆ.

'ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಬೇಕಾದ ಯೋಜನೆಯಲ್ಲಿ ಮಧ್ಯವರ್ತಿಗಳ ಉಪಟಳವೇ ಹೆಚ್ಚಾಗಿದೆ. ಮೂಗಿನ ಕೆಳಗೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿರುವುದೇಕೆ? ಈ ಕೂಡಲೇ ಬೆಳೆ ವಿಮೆ ಯೋಜನೆಯ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಬೇಕು. ಇದು ಕಾಂಗ್ರೆಸ್‌ ಪಕ್ಷದ ಆಗ್ರಹ' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News