ಚಿಕ್ಕಮಗಳೂರಿನಲ್ಲಿ ಮುಂದುವರಿದ ಭಾರೀ ಮಳೆ; ಜುಲೈ 12ರ ವರೆಗೆ ಶಾಲೆಗಳಿಗೆ ರಜೆ
Update: 2022-07-10 18:20 IST
ಚಿಕ್ಕಮಗಳೂರು, ಜುಲೈ 10: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್. ಆರ್. ಪುರ, ಮೂಡಿಗೆರೆ, ಕಳಸ ಮತ್ತು ಚಿಕ್ಕಮಗಳೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಜುಲೈ 11 ಮತ್ತು 12ರಂದು ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.
ಭಾರೀ ಮಳ ಹಿನ್ನೆಲೆ ಜುಲೈ 6ರಿಂದ 9ರವರೆಗೆ ಶಾಲೆ, ಪ್ರೌಢ ಶಾಲೆಗೆ ರಜೆ ನೀಡಲಾಗಿತ್ತು. ಮಳೆ ಜೋರಾದ ಹಿನ್ನೆಲೆ ರಜೆ ಮುಂದುವರಿಕೆ ಮಾಡಲಾಗಿದೆ.