×
Ad

ಬಿಜೆಪಿ ಷಡ್ಯಂತ್ರಕ್ಕೆ ಗೋವಾ ಕಾಂಗ್ರೆಸ್ ಮಣಿಯುವುದಿಲ್ಲ: ದಿನೇಶ್ ಗುಂಡೂರಾವ್

Update: 2022-07-11 17:50 IST

ಬೆಂಗಳೂರು, ಜು. 11: ‘ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಅನೇಕ ವಿಚ್ಛಿದ್ರಕಾರಿ ಶಕ್ತಿಗಳು ಕೈ ಜೋಡಿಸಿವೆ. ಗೋವಾ ಕಾಂಗ್ರೆಸ್‍ನ್ನು ಒಡೆಯುವ ಷಡ್ಯಂತ್ರದ ಹಿಂದೆ ಕೇವಲ ಬಿಜೆಪಿಯಷ್ಟೇ ಅಲ್ಲ, ಇಲ್ಲಿನ ಗಣಿ ಮತ್ತು ಕಲ್ಲಿದ್ದಲಿನ ಲಾಬಿಯೂ ಕೆಲಸ ಮಾಡುತ್ತಿದೆ. ಗಣಿ ಮಾಫಿಯಾ ಮತ್ತು ಬಿಜೆಪಿ ಸರಕಾರ ಗೋವಾವನ್ನು ಪ್ರತಿಪಕ್ಷ ಮುಕ್ತ ರಾಜ್ಯ ಮಾಡುವ ಹುನ್ನಾರದಲ್ಲಿವೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಗೋವಾ ರಾಜ್ಯವನ್ನು ಪ್ರತಿಪಕ್ಷ ಮುಕ್ತ ರಾಜ್ಯ ಮಾಡುವ ಬಿಜೆಪಿಯ ಹುನ್ನಾರ ನಡೆಯುವುದಿಲ್ಲ. ಗಣಿ ಮಾಫಿಯಾದ ಜೊತೆ ಶಾಮೀಲಾಗಿರುವ ಗೋವಾದ ಬಿಜೆಪಿ ನೇತೃತ್ವದ ಸರಕಾರ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ಗೋವಾ ಕಾಂಗ್ರೆಸ್ ಈ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಸದಾ ಹೋರಾಡಲಿದೆ. ಬಿಜೆಪಿಯ ಷಡ್ಯಂತ್ರಕ್ಕೆ ಗೋವಾ ಕಾಂಗ್ರೆಸ್ ಯಾವತ್ತೂ ಮಣಿಯುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News