×
Ad

ಐಎಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಆರ್. ಲತಾ ನೇಮಕ

Update: 2022-07-12 09:37 IST
ಆರ್. ಲತಾ

ಬೆಂಗಳೂರು: ರಾಜ್ಯ ಸರಕಾರವು 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿಯಾಗಿದ್ದ ಕೆ. ಶ್ರೀನಿವಾಸರನ್ನು ವರ್ಗಾವಣೆ ಮಾಡಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಯಾವುದೇ ಸ್ಥಳವನ್ನು ನಿಯುಕ್ತಿ ಮಾಡಿಲ್ಲ.

ವರ್ಗಾವಣೆಗೊಂಡ ಅಧಿಕಾರಿಗಳು

-ಅಮ್ಲನ್ ಆದಿತ್ಯಾ ಬಿಸ್ವಾಸ್- ಬೆಂಗಳೂರು ವಿಭಾಗೀಯ ಆಯುಕ್ತರಾಗಿ ವರ್ಗಾವಣೆ 

ಕ್ಯಾಪ್ಟನ್ ಡಾ.ರಾಜೇಂದ್ರ ಸಹಕಾರಿ ಸೊಸೈಟಿಗಳ ರಿಜಿಸ್ಟ್ರಾರ್ ಆಗಿ ವರ್ಗಾವಣೆ

ಸುಂದರೇಶ್ ಬಾಬು- ಬೆಂಗಳೂರು ಸ್ಮಾರ್ಟ್ ಸಿಟಿ ಎಂಡಿ ಯಾಗಿ ವರ್ಗಾವಣೆ

ಸುರಲ್ಕರ್ ವಿಕಾಸ್ ಕಿಶೋರ್ ಕಾರ್ಯದರ್ಶಿ ಕೆ.ಪಿ.ಎಸ್.ಸಿ ಸ್ಥಾನಕ್ಕೆ ವರ್ಗಾವಣೆ

ಶಿವಾನಂದ ಕಾಪಶಿ- ದಾವಣಗೆರೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಹೊನ್ನಾಂಬಾ- ಗದಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಆರ್ ಲತಾ- ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಲೋಖಂಡೆ ಸ್ನೇಹಲ್ ಸುಧಾಕರ್- ಉಪ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News