×
Ad

ಶಾಸಕ ಯತ್ನಾಳ್ ವಿಚಾರಣೆ ಯಾವಾಗ: ಕಾಂಗ್ರೆಸ್ ಪ್ರಶ್ನೆ

Update: 2022-07-12 10:13 IST

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ಹಗರಣಕ್ಕೆ ಸಂಬಂಧಿಸಿ ಶಾಸಕ ಯತ್ನಾಳ್ ಅವರಿಗೆ ಎಲ್ಲ ಮಾಹಿತಿಯಿದೆಯಂತೆ ಅವರನ್ನು ವಿಚಾರಣೆ ಯಾವಾಗ ಮಾಡುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಾಸಕ ಯತ್ನಾಳ್ PSI ಹಗರಣದ ಬಗ್ಗೆ ಹೇಳಿದ್ದನ್ನ ಕೇಳಿದ್ದೀರಾ?  ಹಗರಣದ ಎಲ್ಲಾ ಮಾಹಿತಿ ಅವರಿಗಿದೆಯಂತೆ. ಅವರ ವಿಚಾರಣೆ ಯಾವಾಗ? ಮಾಜಿ ಸಿಎಂ ಮಗ ಯಾರು? ಇನ್ಯಾವ "ದೊಡ್ಡವರು" ಈ ಹಗರಣದಲ್ಲಿ ಭಾಗಿಯಾಗಿದ್ದಾರೆ? ಯಾರು ಯಾರಿಗೆ ಕಿಕ್ ಬ್ಯಾಕ್ ಹೋಗಿದೆ? ಪಿಎಸ್ಐ ಹಗರಣದ ನ್ಯಾಯಾಂಗ ತನಿಖೆಗೆ ವಹಿಸಲು ಭಯಪಡುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದೆ. 

ಪಿಎಸ್ಐ ನೇಮಕಾತಿ ಅಕ್ರಮದ ಹಗರಣಕ್ಕೆ ಸಂಬಂಧಿಸಿ ಸೋವಾರ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, ಪಿಎಸ್ಐ ಅಕ್ರಮದಲ್ಲಿ ಎಲ್ಲರದ್ದೂ ಪಾಲು ಇದೆ. ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಬಿಚ್ಚಿ ಹೇಳಬೇಕು. ಇದು ಒಂದು ದೊಡ್ಡ ಹಗರಣ ಇದೆ. ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ. ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ. ಅದಕ್ಕಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು. ಪಿಎಸ್ಐ ಅಕ್ರಮದಲ್ಲಿ ದೊಡ್ಡ ದೊಡ್ಡವರು ಇದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News