×
Ad

'ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್‌ ಸ್ಟ್ಯಾಂಪ್‌ ಅಷ್ಟೇ': ಬಿಜೆಪಿ

Update: 2022-07-12 11:44 IST
ಫೈಲ್ ಚಿತ್ರ

ಬೆಂಗಳೂರು: 'ಸಿದ್ದರಾಮಯ್ಯ ಎಲ್ಲ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್‌ ಎಲ್ಲವೂ ಸಿದ್ದರಾಮಯ್ಯ ಅವರ ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್‌ ಸ್ಟ್ಯಾಂಪ್‌ ಅಷ್ಟೇ' ಎಂದು ಬಿಜೆಪಿ ವ್ಯಂಗ್ಯವಾಡಿದೆ. 

ಇದನ್ನೂ ಓದಿ...  ಶಾಸಕ ಯತ್ನಾಳ್ ವಿಚಾರಣೆ ಯಾವಾಗ: ಕಾಂಗ್ರೆಸ್ ಪ್ರಶ್ನೆ

'ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ! ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು, ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ. ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು ಅಸಹಾಯಕ ಡಿಕೆಶಿ ಆಗಿರುವುದು ವಿಪರ್ಯಾಸ' ಎಂದು ಬಿಜೆಪಿ ಟ್ವೀಟ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News