×
Ad

ಮಡಿಕೇರಿ | ಮುಖ್ಯಮಂತ್ರಿಯಿಂದ ಮಳೆಹಾನಿ ವೀಕ್ಷಣೆ, ಪರಿಹಾರ ವಿತರಣೆ

Update: 2022-07-12 12:59 IST

ಮಡಿಕೇರಿ, ಜು.12: ಮಡಿಕೇರಿಯಲ್ಲಿ ಕಳೆದ 12 ದಿನಗಳಿಂದ ಧಾರಾಕಾರವಾಗಿ‌ ಸುರಿದ ಮಳೆಯಿಂದ ಸಂಭವಿಸಿರುವ ಹಾನಿ, ನಷ್ಟದ ಬಗ್ಗೆ ಪರಿವೀಕ್ಷಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಗ್ಗೆ ಆಗಮಿಸಿದ್ದಾರೆ.

ಈ ವೇಳೆ ಮಳೆಯಿಂದ ಮನೆ ಕಳೆದುಕೊಂಡ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಗೋಪಾಲ ಎಂಬವರ ಮನೆಯನ್ನು ಮುಖ್ಯಮಂತ್ರಿ ವೀಕ್ಷಿಸಿದರು.

ಬಳಿಕ ಗೋಪಾಲ ಕುಟುಂಬದವರಿಗೆ 95,100 ರೂ.ನ ಪರಿಹಾರಧನದ ಚೆಕ್ ವಿತರಿಸಿದರು.

 ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಇತರರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News