ಸಂಪಾದಿಸಲು ಶಕ್ತನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಆದೇಶ

Update: 2022-07-12 12:24 GMT

ಬೆಂಗಳೂರು, ಜು.12: ಸಂಪಾದಿಸಲು ಶಕ್ತನಾಗಿರುವ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. 

ಪತ್ನಿಯಿಂದ ಶಾಶ್ವತ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ವಜಾಗೊಳಿಸಿ ಆದೇಶಿಸಿದೆ. ದಂಪತಿ ಕಳೆದ 26 ವರ್ಷದಿಂದಲೂ ಬೇರೆಯಾಗಿ ವಾಸಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಕೆಲಸ ಬಿಟ್ಟಿರುವುದಾಗಿ ಪತ್ನಿಯಿಂದ ಜೀವನಾಂಶ ಕೋರಿ ಪತಿ ಅರ್ಜಿ ಸಲ್ಲಿಸಿದ್ದನು.

ಪತ್ನಿ ಸಹಕಾರ ಬ್ಯಾಂಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 8 ಸಾವಿರ ರೂ.ವೇತನವಿತ್ತು. ಈ ಮುಂಚೆ ಉಡುಪಿಯ ಕೋರ್ಟ್ ವಿಚ್ಛೇದನ ನೀಡಿ ಜೀವನಾಂಶ ನಿರಾಕರಿಸಿತ್ತು. ಜೀವನಾಂಶ ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದನು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಹದಿನೈದು ವರ್ಷದ ಮಗನನ್ನು ಪತ್ನಿಯೇ ಸಾಕುತ್ತಿದ್ದಾಳೆ. ಪತಿ ಸಂಪಾದಿಸಲು ಶಕ್ತವಾದ ದೇಹದಾರ್ಢ್ಯ ಹೊಂದಿದ್ದಾನೆ. ಅಲ್ಲದೇ ಪತಿಗೆ ಪಿತ್ರಾರ್ಜಿತ ಮನೆ, ಆಸ್ತಿಯಲ್ಲಿ ಪಾಲಿರುವ ಹಿನ್ನೆಲೆ ಜೀವನಾಂಶ ಕೋರಿದ್ದ ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News