×
Ad

PSI ಹಗರಣ: ಪೊಲೀಸ್ ವಶದಲ್ಲಿರುವ ಆರೋಪಿ ಗಣಪತಿ ಭಟ್ ಯಾರು?

Update: 2022-07-12 20:03 IST
                                                ಗಣಪತಿ ವಿ. ಭಟ್- ಬಂಧಿತ ಆರೋಪಿ

ಬೆಂಗಳೂರು: ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿ ಗಣಪತಿ ಭಟ್ ವಿಚಾರಣೆಗೆ ಒಳಪಡಿಸಿದ್ದು, ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ವರ್ಗಾವಣೆ  ಹಾಗೂ ಇತರ  ಅಕ್ರಮ ವ್ಯವಹಾರಗಳಲ್ಲಿ ಆರೋಪಿ ಸಕ್ರಿಯನಾಗಿದ್ದ ಎಂದು ತಿಳಿದು ಬಂದಿದೆ. 

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೇರೂರು ನಿವಾಸಿಯಾಗಿರುವ ಗಣಪತಿ ವಿ. ಭಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಇನ್ನು ಕೆಲವು ಶಾಸಕರಿಗೆ ಬಹಳಷ್ಟು ಆತ್ಮೀಯನಾಗಿದ್ದ. ಆರೋಪಿ ಗೃಹ ಸಚಿವರ  ಕಚೇರಿಯಲ್ಲಿ ಆಪ್ತ ಸಹಾಯಕ ಎಂದೂ ಕೆಲವು ಮಾದ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. 

----------------------------------------------------

 ಸ್ಪಷ್ಟನೆ: ಪಿಎಸ್ಐ ಅಕ್ರಮದಲ್ಲಿ ವಿಚಾರಣೆಗೆ ಒಳಪಟ್ಟಿರುವ ಶಿರಸಿ ಮೂಲದ ಗಣಪತಿ ಭಟ್ ತಮ್ಮ ಕಾರ್ಯಾಲಯದ ಸಿಬ್ಬಂದಿಯಲ್ಲ.

- ಆರಗ ಜ್ಞಾನೇಂದ್ರ, ಗೃಹ ಸಚಿವರು.

-------------------------------------------------

ಸೋಮವಾರ ಬೆಂಗಳೂರಿನಿಂದ ಸಿದ್ಧಾಪುರದ ಹೇರೂರಿಗೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಮಧ್ಯರಾತ್ರಿ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News