ಚಿಕ್ಕಮಗಳೂರು: ಪತ್ನಿಯನ್ನು ಉಳಿಸಲು ಹೋಗಿ ಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ
ಚಿಕ್ಕಮಗಳೂರು, ಜು.12: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ವ್ಯಕ್ತಿಯೊಬ್ಬರು ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಹೊರಪೇಟೆ ಗ್ರಾಮದಲ್ಲಿ ಶಾಲಾ ಬಾಲಕಿಯೊಬ್ಬಳು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮಂಗಳವಾರ ಚಿಕ್ಕಮಗಳೂರು ತಾಲೂಕಿನ ಉಂಡೇದಾಸರಹಳ್ಳಿಯಲ್ಲಿರುವ ಕಾಲವೆಯೊಂದರ ಬಳಿ ಚಿಂದಿ ಆಯುವ ಕಾರ್ಮಿಕರಾದ ಸೂರ್ಯ(42) ಹಾಗೂ ಆತನ ಪತ್ನಿ ಗೀತಾ ಎಂಬವರು ಕಾಲುವೆ ಬಳಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದು, ಈ ವೇಳೆ ಸೂರ್ಯನ ಪತ್ನಿ ಗೀತಾ ನೀರಿಗಿಳಿದು ಮೇಲೆ ಬರಲು ಪರದಾಡುತ್ತಿದ್ದುದನ್ನು ಕಂಡ ಸೂರ್ಯ ಆಕೆಯ ನೆರವಿಗಾಗಿ ನೀರಿಗಿಳಿದಿದ್ದಾನೆ.
ಪತ್ನಿಯನ್ನು ದಡ ಸೇರಿಸಿ ತಾನು ಮೇಲೆ ಬರುವ ಸಂದರ್ಭದಲ್ಲಿ ಕಾಲು ಜಾರಿ ಹಳ್ಳದ ನೀರಿಗೆ ಬಿದ್ದ ಸೂರ್ಯ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಕಾರ್ಮಿಕ ಸೂರ್ಯನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.'