×
Ad

ನ್ಯಾ.ಸಂದೇಶ್ ಟೀಕೆ ಹಿನ್ನೆಲೆ: ಹೈಕೋರ್ಟ್‌ ನಿಂದ ಅರ್ಜಿ ಹಿಂಪಡೆದ ಸೀಮಂತ್‍ಕುಮಾರ್ ಸಿಂಗ್

Update: 2022-07-13 22:23 IST
 ನ್ಯಾ.ಎಚ್.ಪಿ.ಸಂದೇಶ್   |  ಸೀಮಂತ್‍ಕುಮಾರ್ ಸಿಂಗ್

ಬೆಂಗಳೂರು, ಜು.13: ಬೆಂಗಳೂರು ನಗರ ಡಿಸಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಉಪತಹಶೀಲ್ದಾರ್ ಪಿ.ಎಸ್.ಮಹೇಶ್ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾ.ಎಚ್.ಪಿ.ಸಂದೇಶ್ ಅವರು ತಮ್ಮನ್ನು ಕುರಿತು ಟೀಕೆ ಮಾಡಿರುವ ಅಂಶಗಳನ್ನು ಕೈಬಿಡುವಂತೆ ಕೋರಿ ಎಸಿಬಿ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.   

ಅರ್ಜಿ ಹಿಂಪಡೆಯುವ ಕುರಿತು ಸೀಮಂತ್‍ಕುಮಾರ್ ಸಿಂಗ್ ಪರ ವಕೀಲರು ಸಲ್ಲಿಸಿದ ಮೆಮೊ ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಅರ್ಜಿ ಹಿಂಪಡೆಯಲು ಅನುಮತಿಸಿತು. 

ಇದನ್ನೂ ಓದಿ... ಎಸಿಬಿ ಕಚೇರಿಗಳು ವಸೂಲಿ ಕೇಂದ್ರ ಎಂದಿದ್ದಕ್ಕೆ ನನಗೆ ವರ್ಗಾವಣೆಯ ಬೆದರಿಕೆ: ನ್ಯಾ.ಎಚ್.ಪಿ.ಸಂದೇಶ್

ನ್ಯಾ.ಸಂದೇಶ್ ಅವರ ಟೀಕೆಗೆ ನಿರ್ಬಂಧ ಕೋರಿ ಸೀಮಂತ್‍ಕುಮಾರ್‍ಸಿಂಗ್ ಅವರು ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ. 

ನ್ಯಾ.ಸಂದೇಶ್ ಅವರು ಎಸಿಬಿ ಹಾಗೂ ತಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಿರ್ಬಂಧ ವಿಧಿಸಬೇಕೆಂದು ಎಡಿಜಿಪಿ ಸೀಮಂತ್‍ಕುಮಾರ್‍ಸಿಂಗ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.   

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News