×
Ad

ಹನ್ನೊಂದು ಸಹಾಯಕ ಪ್ರಾಧ್ಯಾಪಕರ ಪಟ್ಟಿ ಪ್ರಕಟ

Update: 2022-07-14 21:39 IST

ಬೆಂಗಳೂರು, ಜು.14: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಲು ಖಾಲಿಯಿದ್ದ ಹೆಚ್ಚುವರಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆ ಮಾಡಿ ರಾಜ್ಯಪತ್ರ ಹೊರಡಿಸಲಾಗಿದೆ. 

2017ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರಕಾರಕ್ಕೆ ಅಂತಿಮ ಪಟ್ಟಿಯನ್ನು ಸಲ್ಲಿಸಿತ್ತು. ಈಗ ಅಭ್ಯರ್ಥಿಗಳ ಅರ್ಹತೆಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆ ಮತ್ತು ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಶ್ವೇತ ಪಾಲನ್‍ಕರ್, ರಮೇಶ್ ಸಿ.ಜಿ., ದೀಪಿಕಾ, ಗೌರಿ ಬೆಳಗಾಂವ್‍ಕರ್, ದತ್ತಾತ್ರೇಯ ಪರಮೇಶ್ವರ ಹೆಗ್ಡೆ, ಅಪೂರ್ವ ಸಿ. ಅನಂತರಾಮು, ಸತೀಶ್ ಕುಮಾರ್ ಬಿ.ಡಿ., ಶೈಲಜ ಹಾಗೂ ಸೀನಾನಾಯಕ್ ಎಸ್. ಎಂಬುವವರ ಹೆಸರನ್ನು ಪ್ರಕಟಿಸಿದ್ದು, 15 ದಿನದೊಳಗೆ ಕಾಲೇಜು ಶಿಕ್ಷಣ ಇಲಾಖೆಯ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸುವಂತೆ ತಿಳಿಸಿದೆ. 

ಅಭ್ಯರ್ಥಿಗಳು 2006 ನಂತರ ಸರಕಾರಿ ಸೇವೆಗೆ ಸೇರಿದ ಕಾರಣ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News