ಮೊಟ್ಟೆ, ಮಾಂಸ ಕಾಯಿಲೆಗಳಿಗೆ ಕಾರಣವಾಗಬಹುದು: ಕರ್ನಾಟಕ ಶಿಕ್ಷಣ ನೀತಿ ಸಮಿತಿ ಪ್ರತಿಪಾದನೆ

Update: 2022-07-14 17:04 GMT

ಬೆಂಗಳೂರು, ಜು. 14: ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಹಾಗೂ ಮಾಂಸ ಸೇವನೆ ವಿದ್ಯಾರ್ಥಿಗಳಲ್ಲಿ ‘ಜೀವನ ಶೈಲಿಯಿಂದ ಉಂಟಾಗುವ ಕಾಯಿಲೆ’ಗೆ ಕಾರಣವಾಗಬಹುದು ಎಂದು ಕರ್ನಾಟಕ ಶಿಕ್ಷಣ ನೀತಿ ಸಮಿತಿ ತನ್ನ ‘ನಿಲುವು ಪತ್ರ’ದಲ್ಲಿ ಸಲಹೆ ನೀಡಿದೆ.

ಸಸ್ಯಾಹಾರ ಪದ್ಧತಿಯೊಂದಿಗ ಸಂಬಂಧ ಹೊಂದಿರುವ ‘‘ಸಾತ್ವಿಕ ಆಹಾರ’’ದ ಸೇವನೆ ಮನಸ್ಸು ಹಾಗೂ ಭಾವನೆಗಳಿಗೆ ಉತ್ತಮ ಎಂದು ಅದು ‘ನಿಲುವು ಪತ್ರ’ ಶಿಫಾರಸು ಮಾಡಿದೆ. ನೂತನ ಶಿಕ್ಷಣ ನೀತಿಯ ಕುರಿತು ಕೇಂದ್ರ ಸರಕಾರಕ್ಕೆ ಸಲಹೆಗಳನ್ನು ನೀಡುವಂತೆ ರಾಜ್ಯಗಳಲ್ಲಿ ಕೋರಲಾಗಿತ್ತು. ಆ ಪ್ರಕ್ರಿಯೆಯ ಒಂದು ಭಾಗ ಈ ‘ನಿಲುವ ಪತ್ರ’. ನೀತಿಯ ಒಂದು ಭಾಗವಾಗಿ ಅದನ್ನು ಅನುಷ್ಠಾನಗೊಳಿಸುವ ಮುನ್ನ ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಸಂಶೋಧನೆ ಹಾಗೂ ತರಬೇತಿ ಮಂಡಳಿ ಪರಿಶೀಲನೆ ನಡೆಸಲಿದೆ.

ಶಾಲಾ ಪಠ್ಯ ಕ್ರಮದ ಕುರಿತು ‘ನಿಲುವು ಪತ್ರ’ ಸಿದ್ಧಪಡಿಸಲು ಕರ್ನಾಟಕ ಸರಕಾರ 26 ಸಮಿತಿಗಳನ್ನು ರೂಪಿಸಿತ್ತು. ಪ್ರತಿ ‘ನಿಲುವು ಪತ್ರ’ದ ನೇತೃತ್ವವನ್ನು ಅಧ್ಯಕ್ಷ ಹಾಗೂ 6 ಶಿಕ್ಷಣ ತಜ್ಞರು ವಹಿಸಿದ್ದರು. ‘‘ಆರೋಗ್ಯ ಹಾಗೂ ಯೋಗಕ್ಷೇಮ’’ ಕುರಿತು ಕರ್ನಾಟಕ ಸರಕಾರಕ್ಕೆ ಸಲ್ಲಿಸಿದ ‘ನಿಲುವು ಪತ್ರ’ ಈ ಸಲಹೆ ನೀಡಿದೆ: ಭಾರತೀಯರ ಸಣ್ಣ ದೇಹಕ್ಕೆ ನಿಯಮಿತ ಮೊಟ್ಟೆ ಹಾಗೂ ಮಾಂಸದ ಕೊಬ್ಬಿನ ಮೂಲಕ ಹೆಚ್ಚು ಶಕ್ತಿ ಪೂರೈಸುವುದು ಜೀವನ ಶೈಲಿಯಿಂದ ಬರುವ ರೋಗಗಳಿಗೆ ಕಾರಣವಾಗಬಹುದು. ಈ ‘ನಿಲುವು ಪತ್ರ’ದ ಅಧ್ಯಕ್ಷತೆಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆ್ಯಂಡ್ ನ್ಯುರೋಸಯನ್ಸಸ್‌ನ ಮಕ್ಕಳು ಹಾಗೂ ಹದಿಹರೆಯದವರ ಮನೋರೋಗ ವಿಭಾಗದ ಮುಖ್ಯಸ್ಥ ಕೆ. ಜಾನ್ ವಿಜಯ್ ಸಾಗರ್ ವಹಿಸಿದ್ದಾರೆ. ಭಾರತದಲ್ಲಿ ಸಕ್ಕರೆಕಾಯಿಲೆಗಳಿಗೆ, ಅವಧಿ ಪೂರ್ವ ಋತುಮತಿಯಾಗುವುದು, ಸಂತಾನ ಹೀನತೆ ಹೆಚ್ಚಲು ಪ್ರಾಣಿ ಜನ್ಯ ಆಹಾರಗಳು ಕಾರಣ ಎಂದು ‘ನಿಲುವು ಪತ್ರ’ ಹೇಳಿದೆ.

ಮಕ್ಕಳಲ್ಲಿ ಬೊಜ್ಜು ಹಾಗೂ ಹಾರ್ಮೋನ್ ಅಸಮತೋಲನವನ್ನು ತಡೆಯಲು ಮೊಟ್ಟೆ, ಸುವಾಸನೆಯುಕ್ತ ಹಾಲು ಹಾಗೂ ಬಿಸ್ಕೆಟ್ ಅನ್ನು ಆಹಾರದಲ್ಲಿ ಬಳಸಬಾರದು ಎಂದು ನಿಲುವು ಪತ್ರ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News