×
Ad

'ಜೀವನ ಅನಿರೀಕ್ಷಿತ ಪವಾಡಗಳಿಂದ ತುಂಬಿದ ಪ್ರಯಾಣ': ಮರವಂತೆ ಬೀಚ್ ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ ಕಿಶನ್ ರೆಡ್ಡಿ

Update: 2022-07-15 12:00 IST

ಬೆಂಗಳೂರು: ಕರಾವಳಿಯ ಸಮುದ್ರ ತೀರಗಳಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮರವಂತೆ (Maravanthe) ಬೀಚ್ ಕೂಡ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. 

ಒಂದು ಕಡೆ ಅರಬ್ಬಿ ಸಮುದ್ರ, ಇನ್ನೊಂಡು ಕಡೆ ಸೌಪರ್ಣಿಕಾ ನದಿ, ಮಧ್ಯೆ ರಾಷ್ಟೀಯ ಹೆದ್ದಾರಿ ಇರುವ ವಿಶಿಷ್ಟ ದೃಶ್ಯ ಕಂಡು ಬರುವ ಈ ಬೀಚ್ ಗೆ ಸಂಬಂಧಿಸಿದ haris_wanderlust ಅವರ ವಿಡಿಯೋ ಒಂದನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

''ಜೀವನವೆಂಬುದು ಅನಿರೀಕ್ಷಿತ ಪವಾಡಗಳಿಂದ ತುಂಬಿದ ಪ್ರಯಾಣವಾಗಿದೆ. ಪ್ರಯಾಣಿಸಿ ಹಾಗೂ ಅದು ತೆರೆದುಕೊಳ್ಳುವುದನ್ನು ನೋಡಿ" ಎಂಬ ಶೀರ್ಷಿಕೆಯೊಂದಿಗೆ ಮರವಂತೆ ಬೀಚ್ ನ ವಿಡಿಯೋ ಸಚಿವ ಕಿಶನ್ ರೆಡ್ಡಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News