×
Ad

ಬೆಳಗಾವಿ | ಭಾರೀ ಮಳೆಗೆ ಗೋಡೆ ಕುಸಿತ: ಬಾಲಕ ಸ್ಥಳದಲ್ಲೇ ಮೃತ್ಯು

Update: 2022-07-15 16:37 IST

ಬೆಳಗಾವಿ:  ತಡರಾತ್ರಿ ಮಳೆಯಿಂದಾಗಿ ಗೋಡೆ ಬಿದ್ದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದಲ್ಲಿ ನಡೆದಿದೆ. 

ಗುರುವಾರ (ನಿನ್ನೆ) ತಡರಾತ್ರಿ ಘಟನೆ ಸಂಭವಿಸಿದ್ದು, ಮೃತ ಬಾಲಕನನ್ನು 15 ವರ್ಷದ ಅನಂತು ಧರ್ಮೇಂದ್ರ ಪಾಶೆಟ್ಟಿ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ವೇಳೆ ಬಾಲಕ ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದ. ಆ ಸಂದರ್ಭದಲ್ಲೇ ಕೊಟ್ಟಿಗೆಯ ಮಣ್ಣಿನ ಗೋಡೆ ಕುಸಿದು ಬಾಲಕ ಅದರಡಿ ಸಿಲುಕಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಬಾಲಕನ ಚೀರಾಟ ಕೇಳಿ ಮನೆಯ ಸದಸ್ಯರು ತಕ್ಷಣ ಧಾವಿಸಿದರು. ಮಣ್ಣಿನ ಗೋಡೆಯ ಅವಶೇಷ ತೆಗೆದು ಬಾಲಕರನ್ನು ಹೊರಗೆಳೆದರು. ಅಷ್ಟರೊಳಗೆ ಬಾಲಕ ಕೊನೆಯುಸಿರೆಳೆದಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News