ಶಿರಾಡಿ ಘಾಟಿಯ ದೋಣಿಗಾಲ್ ಬಳಿ ರಸ್ತೆ ಕುಸಿತ: ಘನ ವಾಹನಗಳ ಸಂಚಾರ ನಿಷೇಧ, ಬದಲಿ ಮಾರ್ಗ ವ್ಯವಸ್ಥೆ
Update: 2022-07-15 19:16 IST
ಹಾಸನ: ಸಕಲೇಶಪುರ ತಾಲೂಕಿನ ರಸ್ತೆಯ ಒಂದು ಬದಿ ಶುಕ್ರವಾರ ಮತ್ತೆ ಕುಸಿದಿದ್ದು, ಮಳೆ ಮುಂದುವರಿದಿರುವುದರಿಂದ ರಸ್ತೆ ಮತ್ತಷ್ಟು ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.
ಇಲ್ಲಿ ಇತರ ವಾಹನಗಳ ಸಂಚಾರಕ್ಕೂ ತೊಡಕಾಗಿದ್ದು, ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ವಾಹನಗಳನ್ನು ಬೇರೆ ಮಾರ್ಗದಲ್ಲಿ ತೆರಳುವಂತೆ ಸೂಚಿಸುತ್ತಿದ್ದಾರೆ.
ಬದಲಿ ಮಾರ್ಗ ವ್ಯವಸ್ಥೆ: 16 ಟನ್ ಗಿಂತ ಕಡಿಮೆ ತೂಕದ ಒಳಗಿನ ವಾಹನಗಳು "ಹಾಸನ-ಅರಕಲಗೂಡು-ಕುಶಾಲನಗರ-ಸಂಪಾಜೆ" ಮಾರ್ಗದ ಮತ್ತು "ಹಾಸನ-ಬೇಲೂರು-ಮೂಡಿಗೆರೆ- ಚಾರ್ಮುಡಿ ಘಾಟ್" ಮಾರ್ಗದ ಮೂಲಕ ಮಂಗಳೂರು ತಲುಪುವುದು.
16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣಿಕೆ ಮಾಡುವ ವಾಹನಗಳು ಈ ಮೇಲ್ಕಂಡ ಎರಡು ಮಾರ್ಗಗಳನ್ನು ಹೊರತುಪಡಿಸಿ ಇನ್ನಿತರೆ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಗಳು ಅದೇಶಮಾಡಿದ್ದಾರೆ.