ರಾಘವೇಂದ್ರ ಶೆಟ್ಟಿ ವಿರುದ್ಧ ವಾರಂಟ್ ಜಾರಿಗೊಳಿಸುವಲ್ಲಿ ಪೊಲೀಸರು ವಿಫಲ: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್

Update: 2022-07-15 17:48 GMT

ಬೆಂಗಳೂರು, ಜು.15: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ವಾರಂಟ್‍ಗಳನ್ನು ಜಾರಿ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ದೂರಿದ್ದಾರೆ.

ಶುಕ್ರವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನ್ಯಾಯಾಲಯವು 2019ರಿಂದ ಬಂಧಿಸುವಂತೆ, ಇನ್‍ಸ್ಪೆಕ್ಟರ್ ಮತ್ತು ಆಯುಕ್ತರಿಗೆ ಆದೇಶಿಸಿದೆ. ಆದರೆ ಪೊಲೀಸರು ರಾಘವೇಂದ್ರ ಶೆಟ್ಟಿ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಅವರು ನಿನ್ನೆಯವರೆಗೆ ನಿಗಮದ ಅಧ್ಯಕ್ಷರಾಗಿದ್ದರು. ದಯವಿಟ್ಟು ಗಮನಿಸಿ ಎಂದು ತಿಳಿಸಿದ್ದಾರೆ.

ವಾರಂಟ್ ಸಂಬಂಧ ವಿಫಲರಾದ ಪೊಲೀಸರಿಗೆ ಐಪಿಸಿ 166, 166ಎ, 166ಬಿ ವಿಧಿಗಳ ಅನ್ವಯ ಶಿಕ್ಷೆ ವಿಧಿಸಬಹುದಾಗಿದೆ. ಒಬ್ಬ ವ್ಯಕ್ತಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಪೊಲೀಸರು ಆತನು ತಲೆಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಗಳಿಗೆ ಹೇಳುವುದು ಸರಿಯಲ್ಲ. ರಾಘವೇಂದ್ರ ಶೆಟ್ಟಿ ವಿರುದ್ಧ ದೂರು ನೀಡಿರುವ 65 ವರ್ಷದ ಹಿರಿಯ ನಾಗರಿಕನಿಗೆ ಇಂದಿಗೂ ಅವರು ತೊಂದರೆ ನೀಡುತ್ತಲೇ ಇದ್ದಾರೆ ಎಂದು ರೂಪಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News