ಆನೇಕಲ್: ಪತ್ನಿಯ ಕೊಲೆ; ಆರೋಪಿ ಪತಿ ಸೆರೆ

Update: 2022-07-16 05:19 GMT

ಆನೇಕಲ್ : ಮಹಿಳೆಯೋರ್ವರನ್ನು ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಮಾಲೂರು ಕೆಂಬತ್ತನಹಳ್ಳಿ ಮೂಲದ ಪ್ರೇಮಾ (23) ಮೃತರು ಎಂದು ಗುರುತಿಸಲಾಗಿದ್ದು, ಅವರ ಪತಿ ವೆಂಕಟೇಶಾಚಾರಿ (30) ಕೊಲೆ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ವೆಂಕಟೇಶಾಚಾರಿ ಕೈಮಗ್ಗ ಕೆಲಸ ಮಾಡಿಕೊಂಡಿದ್ದು, ಆತನ ಪತ್ನಿ ಪ್ರೇಮಾ ಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಒಂದು ಹೆಣ್ಣು ಮಗು ಇದ್ದು ಎರಡನೇ ತರಗತಿಯಲ್ಲಿ ಕಲಿಯುತ್ತಿದೆ.

ಇತ್ತೀಚೆಗೆ ಗಂಡ ಹೆಂಡತಿಯ ನಡುವೆ ಅನೈತಿಕ ಸಂಬಂಧ ಕುರಿತು ಆಗಾಗ್ಗೆ ಜಗಳ ನಡೆಯುತಿತ್ತು. ತಮಿಳುನಾಡು‌ ಮೂಲದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಇರುವ ಆರೋಪವೇ ಕೊಲೆಗೆ ಕಾರಣ, ಆರೋಪಿ ಕೊಲೆ ಕೃತ್ಯದ ನಂತರ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಆಗಮಿಸಿ ಪತಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News