ವಿಜಯಪುರ: ರೈಲು ಢಿಕ್ಕಿ ಹೊಡೆದು 90ಕ್ಕೂ ಹೆಚ್ಚು ಕುರಿಗಳು ಸಾವು

Update: 2022-07-16 16:03 GMT

ವಿಜಯಪುರ: ರೈಲು ಢಿಕ್ಕಿ ಹೊಡೆದು 90ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ರೈಲು ನಿಲ್ದಾಣದ ಬಳಿ ಶನಿವಾರ ನಡೆದಿದೆ.

ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತಿದ್ದ ಕುರಿಗಳಿಗೆ ರೈಲು ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಕೂಡಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News