×
Ad

ಕನ್ನಡ ಚಿತ್ರರಂಗದ ಹಿರಿಯ ಮೇಕಪ್ ಕಲಾವಿದ ಎಂ.ಎಸ.ಕೇಶವಣ್ಣ ನಿಧನ

Update: 2022-07-16 23:23 IST

ಮೈಸೂರು,ಜು.16: ಕನ್ನಡ ಚಿತ್ರರಂಗದ ಹಿರಿಯ ಮೇಕಪ್ ಕಲಾವಿದ ಎಂ ಎಸ್ ಕೇಶವಣ್ಣ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದಾಗಿ ಕಳೆದ ಎರಡು ಮೂರು ದಿನಗಳಿಂದ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನ ಹೊಂದಿದ್ದಾರೆ.

ಸರಿಸುಮಾರು 30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಲವಾರು ಕಲಾವಿದರಿಗೆ ಮೇಕಪ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ ಕೇಶವಣ್ಣ ಅವರು, ಮೊಟ್ಟಮೊದಲ ಬಾರಿಗೆ ಹಾಸ್ಯ ನಟ ನರಸಿಂಹರಾಜು ಅವರಿಗೆ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಖ್ಯಾತನಟರಾದ ರವಿಚಂದ್ರನ್, ರಾಜ್ ಕುಮಾರ್, ರಜನಿಕಾಂತ್, ಅಂಬರೀಷ್, ಪುನೀತ್ ರಾಜಕುಮಾರ್, ಅನಂತ್ ನಾಗು ಸೇರಿದಂತೆ ಸಾಕಷ್ಟು ನಟರಿಗೆ ಬಣ್ಣ ಹಚ್ಚಿದ್ದಾರೆ.

ಮೃತರ ಅಂತ್ಯಕ್ರಿಯೆಯು ಮೈಸೂರಿನಲ್ಲಿ ರವವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News