×
Ad

ಪಠ್ಯ ಪುಸ್ತಕ ಪರಿಷ್ಕರಣೆ, ಮುದ್ರಣ ದೊಡ್ಡ ಹಗರಣ: ಕೋಟಗಾನಹಳ್ಳಿ ರಾಮಯ್ಯ

Update: 2022-07-17 22:21 IST
ಕೋಟಗಾನಹಳ್ಳಿ ರಾಮಯ್ಯ

ತಿಪಟೂರು: ಪುಸ್ತಕ ಪರಿಷ್ಕರಣೆಯ ಹೋರಾಟ ದೀಪ ಆಗ ಬೇಕು.  ಪಠ್ಯ ಪುಸ್ತಕ ಪರಿಷ್ಕರಣೆ, ಮುದ್ರಣ ದೊಡ್ಡ ಹಗರಣವಾಗಿದೆ. ಪಠ್ಯ ಪುಸ್ತಕ ವನ್ನು ರದ್ದಿ ಮತ್ತು ಮೂರನೇ ದರ್ಜೆ ಪೇಪರ್ ನಲ್ಲಿ ಮುದ್ರಣ ಮಾಡಲಾಗುತ್ತಿದೆ ಎಂದು ಹೋರಾಟಗಾರ ಹಾಗೂ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ತಿಟೂರಿನಲ್ಲಿ ಜಾಗೃತಿ ತಿಪಟೂರು ಮತ್ತು ವಿಶ್ವಮಾನವ ಕ್ರಾಂತಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ  ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಜನಜಾಗೃತಿಗಾಗಿ ಪ್ರತಿಭಟನಾ ಜಾತಾ ಹಾಗೂ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಹುಸಿ ಚರಿತ್ರೆ ಹೇಳಲು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ, ಬಹುತ್ವ ಪಠ್ಯ ಅವರಿಗೆ ಬೇಕಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಮಕ್ಕಳ ಜೊತೆ ಚೆಲ್ಲಾಟವಾಡುತಾ ಇದೆ. ಈ ದೇಶವನ್ನು ಬ್ರಾಹ್ಮಣ ಎಂಬ ವಿಷದ ಹಾವು ಕಚ್ಚಿದೆ. ಸರ್ಕಾರದ ವಿರುದ್ಧ ದಂಗೆ ಎದ್ದು ಕಿತ್ತೊಗೆಯಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಎನ್.ಎಲ್.ಮುಕುಂದರಾಜ್ ಮಾತನಾಡಿ , ಎರಡು ಸಾವಿರ ವರ್ಷ ದಿಂದ ನಮಗೆ ಮೋಸ ಮಾಡುತ್ತಿದ್ದಾರೆ,  ಬಿ.ಸಿ.ನಾಗೇಶ್ ಅವರೇ  ದೇಶದ ಕೆಲಸ ಮಾಡಿ ಎಂದರೆ ಜನಿವಾರದ ಕೆಲಸ ಮಾಡಿದ್ರಿ, ಕೆಟ್ಟ ಬ್ರಾಹ್ಮಣರ  ಪಠ್ಯ ಗಳನ್ನು ಅಳವಡಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಡ ಗೀತೆ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಚಕ್ರ ತೀರ್ಥ ನನ್ನು ಜೈಲಿಗೆ ಹಾಕಿ, ಪಠ್ಯ ಪುಸ್ತಕ ರದ್ದಿಗೆ ಆಗ್ರಹಿಸಿದರು. ಪುಸ್ತಕ ಮುದ್ರಣದ 150 ಕೋಟಿ ಜನರ ತೆರಿಗೆ ಹಣ, ನಿಮ್ಮ ಕೊಬ್ಬರಿ ಮಂಡಿ ಹಣವಲ್ಲ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜನ ಜಾಗೃತಿ ಸಮಿತಿಯ ಸಿ.ಬಿ.ಶಶಿಧರ್,    ಪಾದಯಾತ್ರೆ ಹೊರಟಾಗ ಬಹಳ ಜನ ಗೇಲಿ ಮಾಡಿದರು, ಗಾಂಧಿ ಎಷ್ಟು ಜನ ಇದ್ದಾರೆ ಎಂದು ನೋಡದೆ ಪಾದಯಾತ್ರೆ ಮಾಡುತ್ತಿದ್ದರು, ಅದೇ ರೀತಿ ನಾವು ಪಾದಯಾತ್ರೆ ಹೊರಟಾಗ ತಿಪಟೂರಿನ ಜನ ನಮಗೆ ಬೆಂಬಲ ಸೂಚಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಇಷ್ಡೆಲ್ಲಾ ಹೋರಾಟಗಳು ನಡೆಯುತ್ತಿದ್ದರೂಸರಕಾರ, ಮಂತ್ರಿ ಮಾತನಾಡುತಿಲ್ಲ, ಹಿಂಬಾಗಿಲಿನಿಂದ ಆರೆಸ್ಸೆಸ್ ವಿಚಾರ ತರಲು ಹೊರಟಿದ್ದಾರೆ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷರನ್ನಾಗಿ ಯಾವುದೇ ಅರ್ಹತೆ ಇಲ್ಲದವರನ್ನು ನೇಮಿಸಿ ನಾಗಪುರದವರು ಹೇಳಿದಂತೆ ಪರಿಷ್ಕರಣೆ ಮಾಡಲಾಗಿದೆ.ಕಸ ಹೊಡೆಯುವವರು ಎ.ಸಿ., ಡಿ.ಸಿ.,ಯಾಗುತ್ತಿರುವುದನ್ನು ಸಹಿಸದೆ ಅಧಿಕಾರಿಗಳೇ ಅವರು ಕೇಳುವಂತಹ ಅಧಿಕಾರ, ಶಿಕ್ಷಣ ಕೊಡಲು ಹೊರಟಿದ್ದಾರೆ.

ಸಮಾನತೆ ಹೇಳಿದ ಬುದ್ಧ, ಬಸವ, ಅಂಬೇಡ್ಕರ್ ಶತೃಗಳು, ಆ ಹಿನ್ನಲೆಯಲ್ಲಿ ಯೇ ಇವರನ್ನೆಲ್ಲಾ ಬಿಟ್ಟು ಪಠ್ಯ ಪುಸ್ತಕ ಹೊರ ತಂದಿದ್ದಾರೆ.
ಶಿಕ್ಷಣ ಸಚಿವರು ಅಸಮರ್ಥ ರಾಗಿರುವುದರಿಂದ ರಾಜೀನಾಮೆ ನೀಡಬೇಕು, ಪಠ್ಯ ಪುಸ್ತಕ ಪರಿಷ್ಕರಣೆ ರದ್ದಾಗಬೇಕು, ರೋಹಿತ್ ಚಕ್ರ ತೀರ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಮಾವೇಶಕ್ಕೂ ಮುನ್ನ ತಿಪಟೂರು ಕೋಡಿ ಸರ್ಕಲ್ ನಿಂದ ಸಮಾವೇಶ ದ ಸ್ಥಳದವರೆಗೂ ಬೃಹತ್ ಜಾಥ ನಡೆಸಲಾಯಿತು.
ಸಮಾವೇಶದಲ್ಲಿ  ವಿಶ್ವಮಾನವ ಕ್ರಾಂತಿ ಮಹಾಕವಿ ಕುವೆಂಪು ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ.ರವೀಂದ್ರ, ಆಡಿಟರ್ ನಾಗರಾಜು,  ಸೇರಿದಂತೆ ಹಲವಾರು ಮಠದ ಸ್ವಾಮಿಗಳು ಇತರರು ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News