×
Ad

'ಗ್ರಾ.ಪಂ ಚುನಾವಣೆಯನ್ನೂ ಗೆಲ್ಲಲಾಗದ ಬಿ.ಎಲ್ ಸಂತೋಷ್ ರಿಂದ ಸಚಿವರಿಗೆ ಕ್ಲಾಸ್': ಕಾಂಗ್ರೆಸ್ ವ್ಯಂಗ್ಯ

Update: 2022-07-17 22:48 IST

ಬೆಂಗಳೂರು: 'ಗ್ರಾಮ ಪಂಚಾಯತ್ ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್ ಸಂತೋಷ್ ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್‌ಮಾಸ್ಟರ್‌ನಂತೆ ಕ್ಲಾಸ್ ತೆಗೆದುಕೊಳ್ಳುವುದು ಬಿಜೆಪಿಯ ದುರಂತ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. 

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಸಿಎಂ ಬೊಮ್ಮಾಯಿಯವರೂ, ಬಿ.ಎಲ್ ಸಂತೋಷ್ ಅವರೂ ಸ್ಪಷ್ಟಪಡಿಸಿಕೊಂಡು ಬಿಜೆಪಿ ಆಡಳಿತ ನಡೆಸಲಿ. ಬೊಮ್ಮಾಯಿಯವರು ಕೇವಲ ಬೊಂಬೆಯೇ ಹೇಳಲಿ'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

‘ಬಿಜೆಪಿ ಭ್ರಷ್ಟಾಚಾರದ ಫೈಲ್‍ನ ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು.ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ವಿರುದ್ಧದ ರೋಲ್‍ಕಾಲ್ ಆರೋಪವನ್ನು ಅದುಮಿಹಾಕಲಾಯ್ತು. ಕೊರೋನ ಕಾಲದ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ತನಿಖೆಯೇ ಆಗಲಿಲ್ಲ' ಎಂದು ಕಾಂಗ್ರೆಸ್ ಇಂದಿಲ್ಲಿ ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ,ಇಂದು ತೋಟಗಾರಿಕಾ ಸಚಿವ ಮುನಿರತ್ನರ ಕ್ಷೇತ್ರದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದೀರಿ.ಮುನಿರತ್ನರ ವಿರುದ್ಧ ಕಮಿಷನ್ ಕಿರುಕುಳದ ದೂರು ಬಂದರೂ ಕ್ರಮ ಕೈಗೊಳ್ಳದಿರುವ ತಮ್ಮ ನಡೆ ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ?' ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News