56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕರುಣೆಯಿಲ್ಲವೇ: ಪ್ರಧಾನಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: 'ಕೇಂದ್ರದ ತೆರಿಗೆ ಸರ್ಕಾರ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕುತ್ತಿದೆ, ಬಡವರು ಬದುಕುವ ಅವಕಾಶವೇ ಇಲ್ಲ' ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
''ಬಡವರು ಬಳಸುವ ವಸ್ತುಗಳಿಗೂ #GSThike ಬರೆ ಎಳೆದಿರುವುದು ಬಡವರ ಪಾಲಿಗೆ ಹೆಗಲೇರಿದ ಶನಿಯಾಗಿದೆ. #GSTcouncil ಮೂಲಕ ಸುಲಿಗೆ ಮಾಡುತ್ತಿರುವ ಮೋದಿಯವರೆ, ನಿಮ್ಮ 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕರುಣೆಯಿಲ್ಲವೆ?'' ಎಂದು ಪ್ರಶ್ನೆ ಮಾಡಿದ್ದಾರೆ.
'ಹಾಲು,ಮೊಸರು ಮಜ್ಜಿಗೆಗೂ ಸಾಲದೆಂಬಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಮೇಲೂ GST ವಕ್ರದೃಷ್ಟಿ ಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಹಗಲು ದರೋಡೆ ಮಾಡಲು GST ಒಂದು ಅಸ್ತ್ರವಷ್ಟೆ. ಇದೇನಾ ಮೋದಿಯವರ ಅಚ್ಛೆದಿನ್? ಮೋದಿಯವರೆ, ಬಡವರು ತಿನ್ನುವ ಅನ್ನಕ್ಕೂ ತೆರಿಗೆ ಹಾಕುವ ನಿಮ್ಮ ಸರ್ಕಾರ ಅದ್ಯಾವ ಸೀಮೆಯ ಬಡವರ ಪರ ಸರ್ಕಾರ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ (ಸರಕು ಹಾಗೂ ಸೇವಾ ತೆರಿಗೆ)ಯನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೆಲಆಹಾರ ಸಾಮಗ್ರಿಗಳು ಹಾಗೂ ಆಸ್ಪತ್ರೆಗಳ ಕೊಠಡಿಗಳು ಸೇರಿದಂತೆ ಹಲವಾರು ಅಗತ್ಯ ಸಾಮಗ್ರಿಗಳು ಸೇವೆಗಳು ದುಬಾರಿಯಾಗಲಿದೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 18, 2022
ಕೇಂದ್ರದ ತೆರಿಗೆ ಸರ್ಕಾರ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕುತ್ತಿದೆ, ಬಡವರು ಬದುಕುವ ಅವಕಾಶವೇ ಇಲ್ಲ.
ಬಡವರು ಬಳಸುವ ವಸ್ತುಗಳಿಗೂ #GSThike ಬರೆ ಎಳೆದಿರುವುದು ಬಡವರ ಪಾಲಿಗೆ ಹೆಗಲೇರಿದ ಶನಿಯಾಗಿದೆ.#GSTcouncil ಮೂಲಕ ಸುಲಿಗೆ ಮಾಡುತ್ತಿರುವ ಮೋದಿಯವರೆ, ನಿಮ್ಮ 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕರುಣೆಯಿಲ್ಲವೆ? pic.twitter.com/4nXNr2zT9h