ಅಗತ್ಯ ವಸ್ತುಗಳ ಮೇಲೆ GST: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Update: 2022-07-18 08:15 GMT

ಬೆಂಗಳೂರು: 'ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆಯನ್ನು (GST) ವ್ಯಾಪಾರಿಗಳು ದಾಖಲೆ ಸಲ್ಲಿಸಿ ಅದನ್ನು ಕ್ಲೇಮ್ ಮಾಡಲು ಅವಕಾಶವಿದೆ‌.  ಈ ಕಾರಣದಿಂದ ಉತ್ಪನ್ನಗಳ ದರ ಹೆಚ್ಚಿಸಲೇಬೇಕಾದ ಅನಿವಾರ್ಯ ಇಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ನಾವು ಹಾಲು,‌ ಮೊಸರು ನಾರ್ಮಲ್ ಆಗಿ ಮಾರಾಟ ಮಾಡಿದವರಿಗೆ ಜಿಎಸ್ಟಿ  ಹಾಕಿಲ್ಲ. ಯಾರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ ಅವರಿಗೆ ಜೆಎಸ್ಟಿ ಹಾಕಿದ್ದೇವೆ. ಬ್ರಾಂಡೆಡ್ ಇದೆ ಅವರಿಗೆ ಮಾತ್ರ ಶೇ. 5ರಷ್ಟು ಜಿಎಸ್ಟಿ ಹಾಕಿದ್ದೇವೆ. ಅದನ್ನು ಕ್ಲೇಮ್ ಮಾಡಲು ಅವಕಾಶವಿದೆ‌' ಎಂದು ಹೇಳಿದರು. 

ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಎಸ್​ಟಿ ಕೌನ್ಸಿಲ್​ನಲ್ಲಿ ಚರ್ಚೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News