ನಕಲಿ ಪಾಲಿಯೆಸ್ಟರ್ ತಿರಂಗಾ ಬೇಡ, ಅಸಲಿ ಖಾದಿ ತ್ರಿವರ್ಣ ಧ್ವಜ ಹಾರಿಸಿ: ಸಿಎಂಗೆ ಬಿ.ಕೆ ಹರಿಪ್ರಸಾದ್ ಮನವಿ

Update: 2022-07-18 08:22 GMT

ಬೆಂಗಳೂರು: 'ನಕಲಿ ಪಾಲಿಯೆಸ್ಟರ್ ತಿರಂಗಾ ಬೇಡ, ಅಸಲಿ ಖಾದಿ ತ್ರಿವರ್ಣ ಧ್ವಜ ಹಾರಿಸಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮನವಿ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 1.6ಕೋಟಿ ಜನರು ಖಾದಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.ಅವರ ಹೊಟ್ಟೆಗೆ ಮೋದಿ ಸರ್ಕಾರ ತಣ್ಣೀರು ಬಟ್ಟೆ ಬೀಳುವಂತೆ ಮಾಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ಬೆಂಗೇರಿಯ ಕರ್ನಾಟಕ ಖಾದಿ ಸಂಯುಕ್ತ ಸಂಘದ ಅಸ್ಮಿತೆಗೆ ಪಾಲಿಯೆಸ್ಟರ್ ಧ್ವಜ ಶಾಪ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ತಿದ್ದುಪಡಿಯನ್ನು ತಂದಿದ್ದು, ಪಾಲಿಯೆಸ್ಟರ್‌ನಿಂದ ಮಾಡಿದ ಧ್ವಜಗಳನ್ನು ಹಾರಿಸಲು ಅವಕಾಶ ಮಾಡಿಕೊಟ್ಟಿದೆ. 

ಇದನ್ನೂ ಓದಿ...  "ರಾಷ್ಟ್ರ ಧ್ವಜವನ್ನು ಯಂತ್ರದಲ್ಲಿ ನಿರ್ಮಿಸಬಹುದು, ಪಾಲಿಯೆಸ್ಟರ್ ಬಟ್ಟೆಯನ್ನೂ ಬಳಸಬಹುದು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News