×
Ad

'ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರು, 6 ಕೇಂದ್ರ ಸಚಿವರು ನಿದ್ದೆಯಿಂದ ಇನ್ನೂ ಎದ್ದಿಲ್ಲವೇ?': ಕಾಂಗ್ರೆಸ್

Update: 2022-07-18 16:12 IST

ಬೆಂಗಳೂರು: 'ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿಯವರು ಆಂಧ್ರಪ್ರದೇಶ ಹಾಗೂ ತೆಲಂಗಾಣಗಳ ಪ್ರವಾಹದ ನೆರವಿಗಾಗಿ ಕೇಂದ್ರ ಗೃಹಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ ರಾಜ್ಯದಿಂದ ಆಯ್ಕೆಯಾದ 6 ಕೇಂದ್ರ ಸಚಿವರು & 25 ಬಿಜೆಪಿ ಸಂಸದರು ನಿದ್ದೆಯಿಂದ ಇನ್ನೂ ಎದ್ದಿಲ್ಲವೇ?' ಎಂದು  ಕಾಂಗ್ರೆಸ್ ಪ್ರಶ್ನೆ ಮಾಡಿದೆ

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  'ಅವರೆಲ್ಲ ಕರ್ನಾಟಕದ ಪ್ರವಾಹ ಕಂಡಿಲ್ಲವೇ? ಡಬಲ್ ಇಂಜಿನ್ ಸರ್ಕಾರಗಳ ಕಾರ್ಯವೈಖರಿ ಇದೇನಾ' ಎಂದು ವಾಗ್ದಾಳಿ ನಡೆಸಿದೆ.

'ಕೊರೋನ ಕಾಲಘಟ್ಟದ ನಂತರ ನೈಜ ಜನಪರ ಸರ್ಕಾರ ಮಾಡಬೇಕಿದ್ದಿದ್ದು ಉದ್ಯೋಗಾವಕಾಶಗಳ ಸೃಷ್ಟಿ, ಆರ್ಥಿಕ ಸಬಲೀಕರಣ,ನವೋದ್ಯಮಗಳಿಗೆ ಪ್ರೋತ್ಸಾಹ , ಆರ್ಥಿಕ ಸ್ವವಲಂಬನೆಗೆ ಒತ್ತು ಆದರೆ ಜನವಿರೋಧಿ ಬಿಜೆಪಿ ಸರ್ಕಾರ ಮಾಡುತ್ತಿರುವುದು, ಬೆಲೆ ಏರಿಕೆ, , ತೆರಿಗೆ ಸುಲಿಗೆ, ನವೋದ್ಯಮಗಳ ದಮನ , ನೇಮಕಾತಿಯಲ್ಲಿ ಹಗರಣ' ಎಂದೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News